Saturday, January 15, 2011

TuLu Studies: 213. Kotrupādi

TuLu Studies: 213. Kotrupādi


Kottara is a place in near Manglore also.

1 ಕೊಟ್ಟಾರ ಅಂದರೆ ಭಂಡಾರ ಸ್ಥಳ. ಪಾಳೆಯಗಾರಿಕೆಯ ಕಾಲದಲ್ಲಿ ಬಹುಷಃ ಆಯುಧಾಗಾರವಾಗಿದ್ದಿರಬಹುದು. ಬೀಡಿನಲ್ಲಿ ಮಾತ್ರ ಕೊಟ್ಟಾರದವರು ಇದ್ದರು. ಇವರ ಅಧಿಕಾರ ದ್ಯೋತಕ ಹೆಸರು ಕೊಟ್ಟಾರಿ/ಕೊಟ್ಟಾಲ್ರು. ಇವರು ಬಂಟರು ಮತ್ತು ಜೈನರು.

2 ಇಷ್ಟಲ್ಲದೆ ಇಂತಹ ಬೀಡಿನ ಕೊಟ್ಟಾರಗಳಲ್ಲಿ ಇರುವ ಜನಾಂಗವೊಂದು ಕೊಟ್ಟಾರಿ ಜಾತಿಯಾಗಿ ಮುಂದುವರಿದಿದೆ. ಈ ಬಗ್ಗೆ ಹೆಚ್ಚಿನ ವಿವರಣೆ ಇಂದಿರಾ ಹೆಗ್ಗಡೆಯವರ ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ(2004 ಪ್ರ.ಕನ್ನಡ ಪುಸ್ತಕ ಪ್ರಾಧಿಕಾರ )ದಲ್ಲಿ ಪು.10ರಲ್ಲಿ ಹಾಗೂ 277ರಲ್ಲಿದೆ ಇದೆ.

3 ಕೋಯಿಲ್ ಕೊಲ್ಲೂರು-ಈ ಪದಗಳು ದ್ರಾವಿಡ ಮೂಲದವು. ಅಂದರೆ ಮಂದಿರ. ಕೋಯಿಲ ಇರುವ ಊರು ಕೊಲ್ಲೂರು. ಪ್ರಸಿದ್ಧ ಕೊಲ್ಲೂರು ದೇವಸ್ಥಾನ ಅಲ್ಲದೆ ಮುಲ್ಕಿ ಸೀಮೆಯಲ್ಲೂ ಒಂದು ಕೊಲ್ಲೂರು ಇದೆ. ಇಲ್ತಲಿಯೂ ದೇವಿ ಮಂದಿರ ಇದೆ.

ಇಂದಿಗೂ ಮಲಯಾಲದಲ್ಲಿ ಕೊಇಲ ಎಂದೇ ಮಂದಿರವನ್ನು ಕರೆಯುತ್ತಾರೆ. ಬಹುಷ ತುಳುವರ ಉಪಾಸನೆ 'ಕೋಲ' ಎಂಬ ನರ್ತನ ಸೇವೆಯ ಪದವೂ ಈ ಮೂಲದಿಂದ ಬಂದಿರಬಹುದೆ?

4 ಕೊಟ್ಟ ಎನ್ನುವುದು ದಲಿತರ ವಾಸದ ಸ್ಥಳ ಕೂಡಾ. ಮುಂಡಾಲರು ಮತ್ತು ಕೊರಗರು ವಾಸಿಸುವ ಸ್ಥಳ ಕೊಪ್ಪ/ಕೊಟ್ಟ.

ಡಾ. ಇಂದಿರಾ ಹೆಗ್ಗಡೆ

20 comments:

  1. This comment has been removed by the author.

    ReplyDelete
  2. This comment has been removed by the author.

    ReplyDelete
  3. ಶ್ರೀಮತಿ ಇಂದಿರಾ ಹೆಗ್ಗಡೆಯವರೇ, ತಾವು ತಮ್ಮ ಸಂಶೋಧನಾ ಕೃತಿ ’ಬಂಟರು-ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ’ದಲ್ಲಿ ಬಂಟರ ಸೇವಕ ವರ್ಗವಾದ ’ಕೊಟ್ಟಾರಿ’ ಹಾಗೂ ಬಂಟರ ಇನ್ನೊಂದು ಪ್ರಭೇದವಾದ ’ಬೂಡು ಬಂಟ’ ವರ್ಗದಲ್ಲಿ ಬರುವ ’ಕೊಟ್ಟಾರಿ’ಯ ಉಲ್ಲೇಖ ಮಾಡಿದ್ದೀರಿ. ಅದರ ಕುರಿತಾಗಿ ಕೆಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಯಲು ಇಚ್ಛಿಸುತ್ತಿದ್ದೇನೆ. ಆ ಕೆಲವು ಪ್ರಶ್ನೆಗಳನ್ನು ಸ್ಥೂಲವಾಗಿ ಇಲ್ಲಿ ಕೇಳಿದ್ದೇನೆ. ಇದಕ್ಕೆ ಧನಾತ್ಮಕವಾದ ಪ್ರತಿಕ್ರಿಯೆ ಬರಬಹುದು ಎಂಬ ಆಶಾಭಾವನೆ ನನ್ನದು.

    ReplyDelete
  4. ಹಿಂದೆ ಬೀಡಿನ ಕೊಟ್ಟಾರಗಳಲ್ಲಿ ಇದ್ದ 'ಕೊಟ್ಟಾರಿ' ಜಾತಿಯ ಮೂಲ ಯಾವುದು ಎಂಬ ಬಗ್ಗೆ ಮಾಹಿತಿಯಿದೆಯೇ? ಇವರು ಇಲ್ಲಿನ ಮೂಲ ನಿವಾಸಿಗಳೇ ಅಥವಾ ವಲಸೆ ಬಂದ ಪಂಗಡವೇ ?

    ReplyDelete
  5. ಹಿಂದೂ ಧರ್ಮದ ಶ್ರೇಣೀಕೃತ ಸಮಾಜದಲ್ಲಿ ಅಸ್ಪ್ರಶ್ಯರನ್ನು ಹಿಂದಿನಿಂದಲೂ ಅತ್ಯಂತ ಕೆಳಸ್ತರದಲ್ಲಿ ನೋಡಲಾಗುತ್ತಿತ್ತು. ಇವರಲ್ಲಿ ಪರಿಶಿಷ್ಟ ವರ್ಗದ (Scheduled Class)’ಕೊಟ್ಟಾರಿ’* ಸಮಾಜವೂ ಒಂದು.
    (* ಇಲ್ಲಿ ಉಲ್ಲೇಖಿಸಲಾದ ’ಕೊಟ್ಟಾರಿ’ ಅಧಿಕಾರ ಸೂಚಕ ಅಥವಾ ಪದವಿಯಾಧಾರಿತ ಜಾತಿಸೂಚಕವಲ್ಲ; ಜೈನ, ಬಂಟರಲ್ಲಿ ಕಂಡುಬರುವಂತೆ.
    ಸಾಮಾಜಿಕ, ಆರ್ಥಿಕ, ಧಾರ್ಮಿಕ ಕಾರಣಗಳಿಂದಾಗಿ ತುಳುನಾಡಿನಲ್ಲಿ ಅತ್ಯಂತ ಕಡೆಗಣಿಸಲ್ಪಟ್ಟ ಸಮುದಾಯಗಳಲ್ಲಿ ಈ ’ಕೊಟ್ಟಾರಿ’ಯೂ ಒಂದು. ಭೂಮಿಯ ಒಡೆತನ ಇಲ್ಲದೆ, ಸ್ವತಂತ್ರ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಇಲ್ಲಿನವರೆಗೆ ಕೇವಲ ಸೇವಕರನ್ನಾಗಿ, ಶ್ರಮಜೀವಿಗಳನ್ನಾಗಿ ಇವರನ್ನು ಬಳಸಿಕೊಂಡಿರುವುದು ಕಂಡುಬರುತ್ತದೆ. ಒಂದು ರೀತಿಯಲ್ಲಿ ನೇರವಾಗಿ ಊಳಿಗದಾಳು, ಜೀತದಾಳುಗಳಾಗಿ ಬೀಡು, ಗುತ್ತು ಮನೆಗಳಲ್ಲಿ ನಂಬಿಕೆಯ ಬಂಟರನ್ನಾಗಿಸಿ ದುಡಿಸಿಕೊಳ್ಳಲಾಗಿದೆ. ಊರಿನ ಜಾತ್ರೆ, ಕೋಲಗಳ ಸಂದರ್ಭದಲ್ಲಿ ಇವರು ಬಹಳಷ್ಟು ಸಂಪರ್ಕವಿಲ್ಲದಂತೆ ಬಹುದೂರದಲ್ಲಿ ಕುಳಿತು ನೋಡಬೇಕಾಗಿತ್ತು. ಕೆಲವೊಂದು ದೇವಸ್ಥಾನಗಳಲ್ಲಿ ಎಲ್ಲರಿಗೂ ಗಂಧವನ್ನು ಪ್ರಸಾದವಾಗಿ ನೀಡಿದರೆ ಕೊಟ್ಟಾರಿ ಪಂಗಡಕ್ಕೆ ಇತರ ಕೆಲವು ಅಸ್ಪ್ರಶ್ಯ ಸಮುದಾಯಗಳಿಗೆ ನೀಡುವಂತೆ ಭಸ್ಮವನ್ನು ನೀಡುತ್ತಿದ್ದ ಉದಾಹರಣೆಗಳಿವೆ. ಇವರು ನೀಡುವ ಹಣ್ಣು-ಕಾಯಿ, ಹೂವು, ಎಳನೀರು ಇತ್ಯಾದಿಗಳನ್ನು ಇವರು ಮುಟ್ಟದೇ ಮೇಲ್ವರ್ಗದವರೇ ಕೊಂಡುಹೋಗಿ ಅರ್ಪಿಸುವ ಕ್ರಮ ಇತ್ತು. ಬಂಡಾರಿ, ಕಿಲೆಸಿ ಇವರ ಕ್ಷೌರ ಮಾಡುತ್ತಿರಲಿಲ್ಲ. ಇವರ ಬಟ್ಟೆಯನ್ನು ಮಡಿವಾಳ ಮಡಿ ಮಾಡುತ್ತಿರಲಿಲ್ಲ. ಇವರನ್ನು ಬೀಡು ಗುತ್ತಿನ ಜೈನ, ಬಂಟ ಸಮುದಾಯದವರು ಒಂದು ರೀತಿಯ ’ಅಲಿಖಿತ’ ಕಾನೂನಿನ ಮೂಲಕ ಹಿಡಿತದಲ್ಲಿಟ್ಟುಕೊಂಡು ತಮ್ಮ ಕೌಟುಂಬಿಕ ಆಚರಣೆ ಮತ್ತು ಆರಾಧನೆಗಳಲ್ಲಿ ದುಡಿಸಿಕೊಳ್ಳುತ್ತಿದ್ದರು. ಭೂಮಿ ಮತ್ತು ಸಂಪತ್ತು, ಅಧಿಕಾರ ಮತ್ತು ತೋಳ್ಬಲ ಕೇಂದ್ರೀಕರಿಸಲ್ಪಟ್ಟಿದುದರಿಂದ ಯಾರಿಗೂ ಪ್ರಶ್ನಿಸುವ ಧೈರ್ಯ ಇರುತ್ತಿರಲಿಲ್ಲ. ಆದ ಕಾರಣ ಇಂತಹ ಕೆಲಸಗಳು ತಮ್ಮ ಪರಮ ಕರ್ತವ್ಯವೆಂದು ಭಾವಿಸಿ ನಿಷ್ಠೆಯಿಂದ ಮಾಡುತ್ತಿದ್ದರು. ಇದೇ ಕಾರಣದಿಂದ ’ಕೊಟ್ಟಾರಿ ಚಾಕ್ರಿ’ ಎಂಬ ಪದ ಬಳಕೆಗೆ ಬಂದಿರುತ್ತದೆ. ತುಳು ನಿಘಂಟಿನಲ್ಲಿ ಈ ’ಕೊಟ್ಟಾರಿ ಚಾಕ್ರಿ’ ಎಂದರೆ ಬಿಟ್ಟಿ ಕೆಲಸ, ಊಳಿಗದ ಕೆಲಸ (Servitude) ಎಂಬ ಅರ್ಥ ಇದೆ.

    ReplyDelete
  6. Madras District Manualsನಲ್ಲಿ ಈ ಸಮುದಾಯದ ಮುಖ್ಯಸ್ಥ ’ಕೊಟ್ಟಾರಿ’ ಹಾಗೂ ಮುಂಡಾಲ ಸಮಾಜದ ಮುಖ್ಯಸ್ಥ ’ಮುಖಾರಿ’ಯ ಉಲ್ಲೇಖದ ಸಂದರ್ಭದಲ್ಲಿ ಈ ಎರಡೂ ಸಮುದಾಯಗಳನ್ನು ಜೊತೆಯಾಗಿ ಗುರುತಿಸಲಾಗಿದೆ.

    ReplyDelete
  7. ಹಿಂದಿನ ಕಾಲದ ಕಟ್ಟುನಿಟ್ಟಾದ ಮತ್ತು ಶೋಷಣೀಯ ಮಾದರಿಯಲ್ಲಿದ್ದ ಜಾತಿ ವ್ಯವಸ್ಥೆ ಹಾಗೂ ಬಂಟರ ಗತ್ತು-ಮರ್ಜಿಯ ಜೀವನಶೈಲಿಯನ್ನು ಗಮನದಲ್ಲಿಟ್ಟು ನೋಡಿದಾಗ ಈ ಕೆಳಗಿನ ಪ್ರಶ್ನೆಗಳು ಸ್ವಾಭಾವಿಕವಾಗಿ ಉದ್ಭವಿಸುತ್ತವೆ.

    ReplyDelete
  8. ೧. (ಪು.ಸಂ.136)
    "ಬಂಟರ ಮನೆಗಳ ಸಂಕೀರ್ಣದೊಳಗೆ ’ಕೊಟ್ಯ’ ಇರುತ್ತದೆ. ಕೊಟ್ಯ ಎಂದರೆ ಸಾಮಾನು ಸರಂಜಾಮುಗಳನ್ನು ದಾಸ್ತಾನು ಇಡುವ ಜಾಗ. ಹಸುಗಳನ್ನು ಈ ಕಟ್ಟಡದಲ್ಲಿ ಕಟ್ಟಲಾಗುತ್ತದೆ. ಕೆಲವೆಡೆ ಇಂತಹ ಕೊಟ್ಯಗಳಲ್ಲಿ ಇವರ ಸೇವಕರು ವಾಸಿಸುತ್ತಿದ್ದರು. ಕೊಟ್ಯದಲ್ಲಿ ವಾಸಿಸುವ ಇವರನ್ನು ’ಕೊಟ್ಟಾರಿಲು’ ಎಂದು ಕರೆಯುತ್ತಿದ್ದರು.

    ಪ್ರಶ್ನೆ : ಅತ್ಯಂತ ಕೆಳಸ್ತರದಲ್ಲಿದ್ದ ಕೊಟ್ಟಾರಿಗಳನ್ನು ಬಾರಗರಂತಹ ಮೇಲ್ವರ್ಗದವರು ಅಂದಿನ ಕಾಲದಲ್ಲಿ ತಮ್ಮದೇ ವಾಸಸ್ಥಾನದ ಸಂಕೀ‍ರ್ಣದೊಳಗೆಯೇ ವಾಸಿಸಲು ಅನುವು ಮಾಡಿದ್ದುದು ಸಾಧ್ಯವಿತ್ತೇ ?

    ReplyDelete
  9. 2. (ಪು.ಸಂ.136, 234)
    "ಇವರು ಧನಿಕರಾಗಿದ್ದ ಬಂಟರ ಮನೆಯ ಒಳಕಾರ್ಯಗಳಿಗೆ ಇರುವವರು", " ಕೆಲವು ಕಡೆ ಅಡುಗೆ ಮಾಡಲು ಕೊಟ್ಟಾರಿಗಳು, .... ಇರುತ್ತಿದ್ದರು.")

    ಪ್ರಶ್ನೆ: ಬಾರಗರ ಮನೆಯೊಳಗೆ ಸಮಾಜದ ಇತರ ನಿಮ್ನ ವರ್ಗಗಳ ಜನರಿಗೆ ಮುಕ್ತ ಪ್ರವೇಶಕ್ಕೆ ನಿಷೇಧ ಇದ್ದ ಅಂದಿನ ಕಾಲಘಟ್ಟದಲ್ಲಿ ಕೊಟ್ಟಾರಿಗಳಿಗೆ ಮಾತ್ರ ಈ ವಿಷಯದಲ್ಲಿ ಸಡಿಲಿಕೆ ಯಾಕಿದ್ದಿರಬಹುದು ? ಕೊಟ್ಟಾರಿಯಂತಹ ನಿಮ್ನ ವರ್ಗದ ಜಾತಿ ಜನರು ಬಾರಗರ ಮನೆಯೊಳಗೆ ಮಾಡುತ್ತಿದ್ದ ಕಾರ್ಯಗಳು, ಅನುಸರಿಸುತ್ತಿದ್ದ ವಿಧಾನಗಳು ಅಲ್ಲಿರುತ್ತಿದ್ದ ಜನರಿಗೆ ಹೇಗೆ ಪಥ್ಯವಾಗಿದ್ದಿರಬಹುದು?

    ReplyDelete
  10. 3. (ಪು.ಸಂ.136, 261)
    "ಇವರ ಮದುವೆಯು ವಿಶಿಷ್ಟ ಸಂಪ್ರದಾಯವನ್ನು ಹೊಂದಿದೆ. ಅಂದಿನ ಕಾಲದಲ್ಲಿ ಬಂಟರ ಮದುವೆಗಳು ಅವರವರ ವಿಶಾಲ ಮನೆಗಳಲ್ಲಿ ನಡೆಯುತ್ತಿತ್ತು. ಬಂಟರ ಮನೆಯ ಮದುವೆಯಲ್ಲಿ ಬಂಟರ ವಧು-ವರರ ಹಿಂದೆ ಕೊಟ್ಟಾರಿಯವರ ವಧುವರರನ್ನು ನಿಲ್ಲಿಸುತ್ತಿದ್ದರು. ಬಂಟರ ವಧು-ವರರಿಗೆ ಬಿದ್ದ ಸೇಸೆ ಕೊಟ್ಟಾರಿಯವರ ವಧು-ವರರ ತಲೆಯ ಮೇಲೆ ಬೀಳಬೇಕು. ಆಗ ಕೊಟ್ಟಾರಿಯವರ ವಧು-ವರರು ದಂಪತಿಗಳಾಗುತ್ತಾರೆ."

    ಪ್ರಶ್ನೆ: ಅಂದಿನ ಕಾಲದ ಬಾರಗರ ಗತ್ತು-ವೈಭವಗಳಿಂದ ಕೂಡಿದ ಮದುವೆಯ ಮನೆಯಲ್ಲಿ, ಆ ಮನೆಯ ಯಜಮಾನರು ಎಷ್ಟೇ ವಿಶಾಲ ಮನಸ್ಸಿನವರಾಗಿದ್ದಿರಬಹುದಾದರೂ, ತಮ್ಮದೇ ಸಮುದಾಯದ ಮದುವೆಯ ವೇದಿಕೆಯಲ್ಲಿ, ಅದೂ ಏಕಕಾಲದಲ್ಲಿ!!, ಕೊಟ್ಟಾರಿಯಂತಹ ಅಸ್ಪ್ರಶ್ಯ ಜನಾಂಗದವರನ್ನು ಸಹಭಾಗಿಗಳನ್ನಾಗಿ ಮಾಡಿದ ಸಾಧ್ಯತೆ ಇದ್ದಿರಬಹುದೇ? ಜನ್ಮಾಂತರ್ಗತವಾಗಿ ಸ್ವಾಭಿಮಾನ, ಪ್ರತಿಷ್ಠೆಗೆ ಒಂದು ಕೊಡುವ ಬಂಟ ಸಮುದಾಯದವರು ಈ ವ್ಯವಸ್ಥೆಗೆ ಒಪ್ಪಿಗೆ ನೀಡಲು ಸಾಧ್ಯವಿತ್ತೇ? ಒಂದು ವೇಳೆ ಇದ್ದಿರಬಹುದಾದರೂ, ಇಲ್ಲಿ ಇತರ ಮೂಲದವರಿಗೆ ಅಥವಾ ಸೇವಕ ವರ್ಗದವರಿಗೆ ಇಲ್ಲದ ’ಮೀಸಲಾತಿ’ ಈ ಕೊಟ್ಟಾರಿಗಳಿಗೆ ಮಾತ್ರ ಏಕಿತ್ತು ? ಇದಕ್ಕೆ ಏನಾದರೂ ನಿರ್ದಿಷ್ಟ ಕಾರಣವಿರಬಹುದೇ ?

    ReplyDelete
  11. 4. (ಪು.ಸಂ.53, 297)
    ತೋಕೂರುಗುತ್ತಿನಲ್ಲಿ ನಡೆಯುವ ’ಜೈನ ಅಗೆಲ್’ ಬಡಿಸುವ ಸಂದರ್ಭದಲ್ಲಿ ’ಕೊಟ್ಟಾ‍ರ್‍ದಿ’ಯನ್ನು ನೆನಪಿಸುವ ಕ್ರಮವಿದೆ. ಜೈನ, ಬಂಟರೊಂದಿಗೆ ಇಲ್ಲಿ ಕೊಟ್ಟಾರಿಗೂ ಎಡೆ ಇಡುವ ಸಂಪ್ರದಾಯ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನೂ ಹಲವಾರು ಬಾರಗರ ಮನೆಗಳಲ್ಲಿ ಈ ಆಚರಣೆ ಇಂದಿಗೂ ಜಾರಿಯಲ್ಲಿದೆ. ಇದಕ್ಕೂ ಏನಾದರೂ ನಿರ್ದಿಷ್ಟ ಕಾರಣವಿರಬಹುದೇ? ನನ್ನ ತಿಳುವಳಿಕೆಯ ಪ್ರಕಾರ, ಕೆಲವು ಬಂಟರ ಮನೆಗಳಲ್ಲಿ ಹಿಂದೆ ಅಡುಗೆ ಮಾಡಲು ಮೊಯಿಲಿ, ಮೂಲಿಯ ಇತ್ಯಾದಿ ಜಾತಿಯವರು ಇದ್ದರೂ, ಎಡೆ ಇಡುವ ಸಂದರ್ಭದಲ್ಲಿ ಊಳಿಗದ ’ಕೊಟ್ಟಾ‍ರ್‍ದಿ’ಗೆ ಮಾತ್ರ ಬಡಿಸಲಾಗುತ್ತದೆ. ಅದೂ ಬಾರಗರ ಮನೆಯ ಪಡಸಾಲೆಯಲ್ಲಿ, ಆ ಮನೆತನದ ಸಂದು ಹೋದ ಜೈನ, ಬಂಟ ಹಿರಿಯರೊಂದಿಗೆ!!!

    ನಿಮ್ನವರ್ಗದ ದೈವ ಎಂದೇ ಬಿಂಬಿತವಾಗಿರುವ ’ಕೊರಗ-ತನಿಯ’ ದೈವಕ್ಕೇ ಬಾರಗರು ತಮ್ಮ ಮನೆಯ ಆವರಣದ ಹೊರಗೆ ’ಅಗೆಲ್’ ಬಡಿಸುವ ಕ್ರಮದೊಂದಿಗೆ ಇದನ್ನು ತುಲನೆ ಮಾಡಿದಾಗ, ಅದೇ ಸ್ವರೂಪದ ಜನಾಂಗಕ್ಕೆ ಸೇರಿದವಳಾದ ’ಕೊಟ್ಟಾರ್‍ದಿ’ಗೆ ಮಾತ್ರ ವಿಶೇಷ ಸ್ಥಾನ ಕಲ್ಪಿಸಿರುವುದರ ಹಿನ್ನೆಲೆಯೇನು?

    ಕೊರಗರು ’ಕೊಟ್ಟ’ದಲ್ಲಿ ವಾಸಿಸಿದರೆ, ಕೊಟ್ಟಾರಿಗಳು ’ಕೊಟ್ಯ’ದಲ್ಲಿ ವಾಸಿಸುತ್ತಾರೆ. ಇಂದಿಗೂ ಈ ಎರಡು ಸಮುದಾಯಗಳಲ್ಲಿ ’ಕೊಟ್ಟಗ್ ಕೊಟ್ಯ ಮುಟ್ಟ. ಕೊರಗೆರೆಗ್ ಕೊಟ್ಟಾರ್‍ಲು ಮುಟ್ಟ’ ಎಂಬ ಮಾತು ಪ್ರಚಲಿತದಲ್ಲಿದೆ.

    ReplyDelete
  12. ಕೊಟ್ಟಾರಿಗಳ ’ಕೊಟ್ಯ’ದ ಬಗ್ಗೆ ಪು.ಸಂ.235ರಲ್ಲೂ ಉಲ್ಲೇಖವಿದೆ. ’ಕೊಟ್ಯ’ ಎಂದರೆ ಸಾಮಾನು ಸರಂಜಾಮುಗಳನ್ನು ಇಡುವ ಜಾಗ. ಕೊಟ್ಟಾರಗಳನ್ನು ನೋಡುತ್ತಿದ್ದವರು ಮನೆಯ ಸದಸ್ಯರಂತೆ ಇರುತ್ತಿದ್ದರು. "

    ಇಲ್ಲೂ ಮತ್ತದೇ ಪ್ರಶ್ನೆ, ಎಲ್ಲಿಯ ಮೇಲ್ವರ್ಗದ ಬಂಟ ಬಾರಗರು, ಎಲ್ಲಿಯ ಅಸ್ಪ್ರಶ್ಯ ಎಂದು ಪರಿಗಣಿಸಲ್ಪಟ್ಟ ಕೊಟ್ಟಾರಿಗಳು ?

    ReplyDelete
  13. ಬಂಟರ ಪಟ್ಟ/ಗಡಿಯ ಹೆಸರುಗಳ ಪಟ್ಟಿಯಲ್ಲಿ ಅಧಿಕಾರ ಸೂಚಕ ’ಕೊಟ್ಟಾರಿ’ಯ ಉಲ್ಲೇಖವಿದೆ.

    "ವಿಟ್ಲ ದೊಂಬ ಹೆಗ್ಗಡೆಯ ಬೀಡಿನಲ್ಲಿ ಕೊಟ್ಟಾರಿ ಗಡಿನಾಮಿದೆ. ..ಇವರು ಕೊಟ್ಟಾರ್‍ಲು / ಬೂಡುಬಂಟರು"
    (ಪು.ಸಂ.330)

    ಅದೇ ಈ ಬೂಡುಬಂಟರ ವಿಶ್ಲೇಷಣೆಯ ಸಂದರ್ಭದಲ್ಲಿ "ಇವರಿಗೂ ಬಂಟರಿಗೂ ಸಂಪ್ರದಾಯ ಹಾಗೂ ಇನ್ನಿತರ ವಿಷಯಗಳಲ್ಲಿ ಹೆಚ್ಚಿನ ಭಿನ್ನತೆ ಇಲ್ಲ ಎನ್ನಲಾಗುತ್ತಿದೆ. ಆದರೆ ಇವರು ಪರಿಚಾರಕ ವರ್ಗ ಎಂಬ ಕಾರಣಕ್ಕಾಗಿ ಬಂಟರಿಗಿಂತ ಭಿನ್ನವಾಗಿ ಗುರುತ್ತಿಸುತ್ತಿದ್ದರು. ... ಇತ್ತೀಚಿನ ವರ್ಷಗಳಲ್ಲಿ ಇವರೂ ಬಂಟರ ಮುಖ್ಯವಾಹಿನಿಯ ಜತೆ ಸೇರಿ ಹೋಗುತ್ತಿದ್ದಾರೆ. ...ಆದರೂ ಹಳ್ಳಿಯ ಜನರು ಈಗಲೂ ಇವರನ್ನು ಪ್ರತ್ಯೇಕವಾಗಿ ಗುರುತ್ತಿಸುತ್ತಾರೆ" ಎಂಬ ಮಾಹಿತಿಯಿದೆ.
    (ಪು.ಸಂ.78)


    ಪ್ರಶ್ನೆ: ಬಾರಗರ ಮನೆಗಳ ಸಂಕೀರ್ಣದೊಳಗಿರುವ ಕೊಟ್ಯದ ’ಕೊಟ್ಟಾರಿ’ಗಳಲ್ಲದೆ (ಪು.ಸಂ.136), ಬೀಡಿನಲ್ಲಿರುವ ಪರಿಚಾರಕ ವರ್ಗವೇ ಆದ ಇನ್ನೊಂದು ’ಕೊಟ್ಟಾರಿ ’ ಯಾರು ? ಒಂದು ವೇಳೆ ಈ ಕೊಟ್ಟಾರಿಗಳು ಬೂಡುಬಂಟರೇ ಆಗಿದ್ದಲ್ಲಿ. ’ಪರಿಚಾರಕ’ ಅಥವಾ ’ಸೇವಕ’ ಎಂಬ ಅರ್ಥ ಬರುವ ಪದ ಬಾರಗರ ’ಗಡಿನಾಮ’ ಅಥವಾ ’ಪಟ್ಟದ ನಾಮ’ ಆಗಲು ಸಾಧ್ಯವಿದೆಯೇ ?

    ಈ ಕೊಟ್ಟಾರಿ ’ಬೂಡು ಬಂಟ’ರೇ ಆಗಿದ್ದಲ್ಲಿ, ಬಂಟ ಜನಾಂಗದ ವೀರಪುರುಷ ’ದೇವುಪೂಂಜ’ನ ಚರಿತ್ರೆಯಲ್ಲಿ ಬರುವ ಆತನ ಭಾವ, ಮಂಜಣ ಪೂಂಜನ ಸೋದರಳಿಯ ’ದೇಲಮು / ದಾರಮು ಕೊಟ್ಟಾರಿ’ಯೂ ಬೂಡುಬಂಟನೇ ? ’ಕೊಟ್ಟಾರಿ’ ಎಂಬ ಗಡಿನಾಮ ಹಲವಾರು ದೈವಗಳ ಪಾಡ್ದನಗಳಲ್ಲಿ ಕಂಡುಬರುತ್ತದೆ. ಅವರೆಲ್ಲಾ ಬೂಡು ಬಂಟರೇ ?

    ReplyDelete
  14. This comment has been removed by the author.

    ReplyDelete
  15. 19ನೆಯ ಶತಮಾನದ ಅಂತ್ಯಭಾಗದಲ್ಲಿ (1895-1905) ಬಿಡುಗಡೆಯಾದ Madras District Manuals ಪ್ರಕಾರ ಕೊಟ್ಟಾರಿಗಳ ಜನಸಂಖ್ಯೆ ಕೇವಲ 1217. ಇಂದಿಗೂ ಆ ಸಮುದಾಯದ ಜನಸಂಖ್ಯೆ 8 ಸಾವಿರ ದಾಟಿಲ್ಲ ಎಂದರೆ ಆಶ್ಚರ್ಯವಾಗಬಹುದು. ಅಷ್ಟು ಕಡಿಮೆ ಜನಸಂಖ್ಯೆ ಹೊಂದಿರುವ ಜನಾಂಗವದು. ಇಲ್ಲಿ ಸಾಂದರ್ಭಿಕವಾಗಿ ಮಾತ್ರ ಆ ಸಮುದಾಯದ ರಾಜಕೀಯ ಸ್ಥಿತಿಗತಿಯ ಬಗ್ಗೆ ಒಂದೆರಡು ವಿಚಾರಗಳನ್ನು ಹೇಳಲು ಇಚ್ಛಿಸುತ್ತೇನೆ.

    ರಾಜ್ಯ ರಾಜಕಾರಣದ ಮಟ್ಟಿಗೆ ಹೇಳುವುದಾದರೆ ಹಿಂದಿನ ವಿಟ್ಲ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ ಶಾಸಕನಾಗಿ ಓರ್ವ ಕೊಟ್ಟಾರಿ ಆಯ್ಕೆಯಾಗಿದ್ದಾನೆ. ಕಳೆದ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಪುನರ್ವಿಂಗಡಣೆಯ ಕಾರಣದಿಂದ ಉಳ್ಳಾಲ ವಿಧಾನಸಭಾ ಕ್ಷೇತ್ರದ ಬದಲು ರಚಿತವಾದ ಮಂಗಳೂರು ಗ್ರಾಮಾಂತರ ವಿಧಾನಾಸಭಾ ಕ್ಷೇತ್ರ ಚುನಾವಣೆಯಲ್ಲಿಯೂ ಓರ್ವ ಕೊಟ್ಟಾರಿ ಪ್ರಮುಖ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿರುವುದು ಕಂಡುಬರುತ್ತದೆ. (ಉಲ್ಲೇಖನೀಯ ವಿಚಾರವೆಂದರೆ, ಆ ಎರಡೂ ವಿಧಾನಸಭಾ ಕ್ಷೇತ್ರಗಳು ’ಸಾಮಾನ್ಯ’ ವರ್ಗದ ಕ್ಷೇತ್ರಗಳು. ಸುಳ್ಯ ಇತ್ಯಾದಿ ವಿಧಾನಸಭಾ ಕ್ಷೇತ್ರಗಳಂತೆ ಯಾವುದೇ ಮೀಸಲಾತಿ ಇಲ್ಲದ ಕ್ಷೇತ್ರಗಳು.) ಇಂದು ಅದೇ ಕೊಟ್ಟಾರಿ ರಾಜ್ಯದ ಆಡಳಿತಾರೂಢ ಪಕ್ಷದ ದಕ್ಷಿಣ ಕನ್ನಡದ ಜಿಲ್ಲಾ ಘಟಕ ಅಧ್ಯಕ್ಷನಾಗಿಯೂ ಹುದ್ದೆಯಲ್ಲಿದ್ದಾನೆ.

    ಚುನಾವಣೆಗಳಲ್ಲಿ ’ಜಾತಿ ಬಲ’ವೂ ಪ್ರಮುಖ ಅಂಶವಾಗಿರುವ ಇಂದಿನ ದಿನಗಳಲ್ಲಿ, ಅತ್ಯಂತ ಕಡಿಮೆ ಜನಸಂಖ್ಯೆಯ, ನಿಮ್ನಸ್ತರದಲ್ಲಿದ್ದು ಚಾಕರಿವರ್ಗ ಎಂದೇ ಬಿಂಬಿತವಾಗಿರುವ ’ಕೊಟ್ಟಾರಿ’ ಸಮುದಾಯ ಇಂದು ರಾಜಕೀಯದಲ್ಲಿ ಮಿಂಚುತ್ತಿರಲು ಜೈನ, ಬಂಟ-ಬಾರಗರೇ ಪರೋಕ್ಷ ಕಾರಣರಾಗಿದ್ದಿರಬಹುದೇ ?

    ReplyDelete
  16. ರಕ್ಷಾರವರೇ
    ನಿಮ್ಮ ಅಧ್ಯಯನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದುವರಿಸಿ. ಕೊಟ್ಟಾರಿ ವರ್ಗ ನನಗೆ ಕಂಡು ಬಂದಿರುವುದು ಮಂಗಳೂರಿನಿಂದ ದಕ್ಷಿಣಕ್ಕೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೊಟ್ಟಾರರು ಬಂಟರ ಜೊತೆವಿಲೀನವಾಗಿದ್ದಾರೆ ಎಂಬ ಮಾಹಿತಿನನಗೆ ದೊರೆತಿತ್ತು. ಹಾಗೆಯೇ ಬರೆದಿದ್ದೇನೆ. ಅಲ್ಲದೆ ವಿಟ್ಲದ ಕೊಟ್ಟಾರಿ ಪದಗ್ರಹಣ (ವಿಟ್ಲ ಸೀಮೆಯ ಕೊಟ್ಟಾರದ ಅಧಿಕಾರಿ) ಮಾಡಿದವರು ಕೊಟ್ಟಾರ ಸಮುದಾಯದವರು ಎಂಬುದನ್ನೂ ಉಲ್ಲೇಖಿಸಿದ್ದೇನೆ. ನಿಮ್ಮ ೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಕೊಟ್ಟಾರ ಜನಾಂಗದ ಸಾಂಸ್ಕೃತಿಕ ಅಧ್ಯಯನ ಮಾಡಬೇಕಾಗುತ್ತದೆ. ಸದ್ಯ ನನ್ನಿಂದ ಸಾಧ್ಯವಾಗದು.

    ಜನಾಂಗದ ವಿಷಯ ಅಧ್ಯಯನ ಮಾಡುವಾಘ ಕೆಲವು ಗೊಂದಲಗಳು ಉಂಟಾಗುತ್ತವೆ. ಆ ಗೊಂದಲ ಬಂಟರಲ್ಲೂ ಇದೆ.
    ನಿಮ್ಮ ಪ್ರಶ್ನೆ 1
    ಕೊಟ್ಟಾರಿಗಳು ವಲಸೆ ಬಂದವರೇ.
    ಇದಕ್ಕೆ ಉತ್ತರ ಅಧ್ಯಯನದಿಂದ ಹೊರಬೀಳಬೇಕಾಗಿದೆ. ಅವರು ಅಳಿಯ ಸಂತಾನದವರೇ, ಅಗೆಲ್ ಬಡಿಸುವ, ಬಳಿ ನೋಡುವ ಪದ್ದತಿ ಮಾಯಿಯ ಮೂಲದವೇ ಎಂಬುದನ್ನು ಕಂಡು ಹಿಡಿಯಬೇಕು. ಆದರೂ ಇವರು ಬಂಟರಲ್ಲಿ ವಿಲೀನರಾದ್ದಾರೆ ಎಂಬ ಹೇಳಿಕೆ ಇರುವುದರಿಂದ ಅವರು ವಲಸೆ ಬಂದಿರುವರು ಅಲ್ಲ ಎನ್ನುವುದು ನನ್ನ ಭಾವನೆ.



    2 Madras District Manualsನಲ್ಲಿ ಈ ಸಮುದಾಯದ ಮುಖ್ಯಸ್ಥ ’ಕೊಟ್ಟಾರಿ’ ಹಾಗೂ ಮುಂಡಾಲ ಸಮಾಜದ ಮುಖ್ಯಸ್ಥ ’ಮುಖಾರಿ’ಯ ಉಲ್ಲೇಖದ ಸಂದರ್ಭದಲ್ಲಿ ಈ ಎರಡೂ ಸಮುದಾಯಗಳನ್ನು ಜೊತೆಯಾಗಿ ಗುರುತಿಸಲಾಗಿದೆ.

    ಇದು ತಪ್ಪಿರಬಹುದು. ಸಾಮಾಂತ ಬಲ್ಲಾಳರ ಮತ್ತು ಬಂಟರ ಮನೆಗಳ ಕೊಟ್ಯದಲ್ಲಿ ಇರುವವರು ಕೊಟ್ಟಾರದವರು. ಇವರು ಬಂಟರ ಮತ್ತು ಸಾಮಾಂತ ಬಲ್ಲಾಳರ ಮನೆಗಳ ಒಳಗಿನ ಕೆಲಸವನ್ನೂ ಮಾಡುತ್ತಿದ್ದರು. ನಾನು ಗೊತ್ತಿದ್ದು ನನ್ನ ಕೃತಿಯಲ್ಲಿ ದಾಖಲಿಸದೇ ಇರುವ ವಿಷಯ ಎಂದರೆ ವಾಸದ ಕೊಟ್ಟಾರಿಗಳಿಗೂ ಆಯಾ ಗುತ್ತು ಬೀಡಿನ ಬಂಟ ಬಲ್ಲಾಳಿರಿಗೂ ದೈಹಿಕ ಸಂಬಂಧವೂ ಇರುತ್ತಿತ್ತು ಎಂಬುದನ್ನು. ಅಂತಹ ಮಹಾನುಭಾವನೊಬ್ಬ ಕೊಟ್ಟಾರಿ ಪ್ರೇಯಸಿಯಿಂದ ಜನಿಸಿದ ತನ್ನ ಹೆಣ್ಣು ಮಕ್ಕಳಿಗೂ ಬಂಟ ಗಂಡನ್ನೇ ನೋಡಿ ಮದುವೆಯಾಡಿದ್ದರು.



    ಪ್ರಶ್ನೆ : ಅತ್ಯಂತ ಕೆಳಸ್ತರದಲ್ಲಿದ್ದ ಕೊಟ್ಟಾರಿಗಳನ್ನು ಬಾರಗರಂತಹ ಮೇಲ್ವರ್ಗದವರು ಅಂದಿನ ಕಾಲದಲ್ಲಿ ತಮ್ಮದೇ ವಾಸಸ್ಥಾನದ ಸಂಕೀ‍ರ್ಣದೊಳಗೆಯೇ ವಾಸಿಸಲು ಅನುವು ಮಾಡಿದ್ದುದು ಸಾಧ್ಯವಿತ್ತೇ ?

    ನೀವು ಕೋಟೆದ ಬಬ್ಬು ಪಾಡ್ದನ ಗಮನಿಸಿ ಅವನ ತಾಯಿ ಕಚ್ಚೂರ ಮಾಲ್ದಿ ಕಚ್ಚೂರು ಅರಮನೆಯಲ್ಲಿ ಬೆಳೆದವಳು. ಬಾರಗರು ಸಾಕಿದ ಬಬ್ಬು ಕೂಡಾ ಬಾರಗನೆಂದು ಕರೆಸಿಕೊಮಡ. ಆ ಪಾಡ್ದನವನ್ನು ಒಮ್ಮ ಓದಿ ನೋಡಿ.

    ಕೋಟಿ ಚೆನ್ನಯರು ಜನಿಸಿದ್ದು ಬೀಡಿನ ಒಳಗೆ ಕೋಣೆಯಲ್ಲಿ. ಇಂದು ಇದು ಸಾಧ್ಯವೇ? ಬಂಟರಾಗಲೀ ಜೈನರಾಗಲೀ ಬೀಡಿನ ಒಳಗೆ ಹೆರಿಗೆ ಆಗುವಂತಿಲ್ಲ.

    ಪ್ರ ಕೊರಗರು ’ಕೊಟ್ಟ’ದಲ್ಲಿ ವಾಸಿಸಿದರೆ, ಕೊಟ್ಟಾರಿಗಳು ’ಕೊಟ್ಯ’ದಲ್ಲಿ ವಾಸಿಸುತ್ತಾರೆ. ಇಂದಿಗೂ ಈ ಎರಡು ಸಮುದಾಯಗಳಲ್ಲಿ ’ಕೊಟ್ಟಗ್ ಕೊಟ್ಯ ಮುಟ್ಟ. ಕೊರಗೆರೆಗ್ ಕೊಟ್ಟಾರ್‍ಲು ಮುಟ್ಟ’ ಎಂಬ ಮಾತು ಪ್ರಚಲಿತದಲ್ಲಿದೆ.

    ಉ ಇದೆಲ್ಲ ವ್ಯಂಗಗಳು ಸಮುದಾಯಗಳಲ್ಲಿ ಸಾಮಾನ್ಯ.



    ಪ್ರಶ್ನೆ : ಈ ಕೊಟ್ಟಾರಿ ’ಬೂಡು ಬಂಟ’ರೇ ಆಗಿದ್ದಲ್ಲಿ, ಬಂಟ ಜನಾಂಗದ ವೀರಪುರುಷ ’ದೇವುಪೂಂಜ’ನ ಚರಿತ್ರೆಯಲ್ಲಿ ಬರುವ ಆತನ ಭಾವ, ಮಂಜಣ ಪೂಂಜನ ಸೋದರಳಿಯ ’ದೇಲಮು / ದಾರಮು ಕೊಟ್ಟಾರಿ’ಯೂ ಬೂಡುಬಂಟನೇ ? ’ಕೊಟ್ಟಾರಿ’ ಎಂಬ ಗಡಿನಾಮ ಹಲವಾರು ದೈವಗಳ ಪಾಡ್ದನಗಳಲ್ಲಿ ಕಂಡುಬರುತ್ತದೆ. ಅವರೆಲ್ಲಾ ಬೂಡು ಬಂಟರೇ ?

    ಊತ್ತರ: ದೇವು ಪೂಂಜ ಪಾಡ್ದನದ ಕೊಟ್ಟಾರಿ ಬಂಟನೂ ಆಗಿರಬೇಕು. ಆದರೆ ಬಂಟರು ಮಾತ್ರವಲ್ಲ ಜೈನರಲ್ಲೂ ಕೊಟ್ಟಾರಿ ಗಡಿನಾಮ ಇದೆಮಾತ್ರವಲ್ಲ ಅವರಲ್ಲಿ ಕೊಟ್ಟಾರಿ ಉಪನಾಮವೂ ರೂಢಿಯಲ್ಲಿದೆ.



    ಪ್ರ: ಚುನಾವಣೆಗಳಲ್ಲಿ ’ಜಾತಿ ಬಲ’ವೂ ಪ್ರಮುಖ ಅಂಶವಾಗಿರುವ ಇಂದಿನ ದಿನಗಳಲ್ಲಿ, ಅತ್ಯಂತ ಕಡಿಮೆ ಜನಸಂಖ್ಯೆಯ, ನಿಮ್ನಸ್ತರದಲ್ಲಿದ್ದು ಚಾಕರಿವರ್ಗ ಎಂದೇ ಬಿಂಬಿತವಾಗಿರುವ ’ಕೊಟ್ಟಾರಿ’ ಸಮುದಾಯ ಇಂದು ರಾಜಕೀಯದಲ್ಲಿ ಮಿಂಚುತ್ತಿರಲು ಜೈನ, ಬಂಟ-ಬಾರಗರೇ ಪರೋಕ್ಷ ಕಾರಣರಾಗಿದ್ದಿರಬಹುದೇ ?

    ಇದು ಭಾಗಃಶ ಸರಿ ಇರಬಹದು. ಆದರೆ ಮೀಸಲಾತಿಯ ಲಾಭಕ್ಕಾಗಿ ಅನೇಕ ಜನಾಂಗದವರು ತಾವು ಹಿಂದುಳಿದವರು ದಲಿತರು ಎಂದು ಮೀಸಲಾತಿಯಲ್ಲಿ ಪಟ್ಟಿಯಲ್ಲಿ ಸೇರಲು ಲಾಭಿ ಮಾಡಿಕೊಳ್ಳುತ್ತಿದ್ದಾರೆ. ಇದು ಜಾತಿ ಸಮಸ್ಯೆ ಬೆಳೆಯಲೂ ಕಾರಣವಾಗಿದೆ. ಬಂಟರಲ್ಲಿಯೂ ಹಿಂದುಳಿದವರ ಪಟ್ಟಿಯಲ್ಲಿ ಸೇರಬೇಕೇಂಬ ಒತ್ತಡ ಇತ್ತು. ಆದರೆ"ನಾವು ಹಿಂದುಳಿಯುವುದು ಬೇಡ. ಮುಂದುವರಿಯುತ್ತಾ ಇರೋಣ" ಎಂಬ ಹಿರಿಯರ ಬೋಧನೆ ಇಲ್ಲಿ ಕೆಲಸಮಾಡಿರಬೇಕು.

    ReplyDelete
  17. ಶ್ರೀಮತಿ ಇಂದಿರಾ ಹೆಗ್ಗಡೆಯವರೇ,
    ತಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

    ReplyDelete
  18. ಕೊಟ್ಟಾರಿಗಳು ದಲಿತರಲ್ಲ. ವಿದೇಶಿ ಪ್ರವಾಸಿಗರು ಬರೆದಿದ್ದರೆ ಅವರ ದುಭಾಷಿ ಬ್ರಾಹ್ಮಣರಿಂದ ಪಡೆದ ಮಾಹಿತಿಯಾಗಿದರಬಹುದು.

    ಕೊಟ್ಟಾರಿಗಳು ಬಂಟರ ಮನೆಯಲ್ಲಿ ಅಡುಗೆಯನ್ನೂ ಮಾಡುತ್ತಿದ್ದರು. ಉದಾಹರಣೆಗೆ ಕುಂದಾಪುರ ಎಡ್ತರೆ ಮನೆ. ಬಹುಷಃ ಈ ಮಾಹಿತಿಯನ್ನು ನನ್ನ "ಬಂಟರು....ಕೃತಿಯಲ್ಲಿ ದಾಖಲಿಸಿರಬೇಕು. ಕಾಸರಗೋಡು ಮತ್ತು ಕುಂದಾಪುರದಲ್ಲಿ ಈ ಜನವರ್ಗ ಇದ್ದಾರೆ. ಶ್ರೀಮಂತ ಬಂಟರ ಮತ್ತು ಹಿಂದೂ ಸಾಮಂತ ಬಲ್ಲಾಳರ ಮನೆಗಳಲ್ಲಿ ಇವರು ಅಡುಗೆಯನ್ನೂ ಮಾಡುತ್ತಿದ್ದರು ಎನ್ನುವುದು ಸತ್ಯ ಸಂಗತಿ.

    ReplyDelete
    Replies
    1. ಕೊಠಾರಿ ಜಾತಿ ಬಂಟರ ಸಮುದಾಯ ಜಾತಿಯ

      Delete
  19. ಕೊಟ್ಟಾರಿ ಬಂಟರ ಸಮುದಾಯ ಜಾತಿಯ

    ReplyDelete