Friday, August 19, 2011

ವಿವರಣೆ

ಶಂಕರ ಪೂಜಾರಿಯವರೇ ವಂದನೆಗಳು.

ನಿಮ್ಮ ಸಂದೇಹಗಳಿಗೆ ಉತ್ತರ. : ಪ್ರಶ್ನೆ 1 ಪು 151
ತಾಯಿಯ ಪ್ರತಿನಿಧಿಯಾಗಿ ಮಗ ಅಧಿಕಾರ ಚಲಾಯಿಸುತ್ತಾನೆ. ತಾಯಿಯ ಮರಣಾನಂತರ ಆತ ಬದುಕಿದ್ದರೆ ಅರಸನ ನಾಗಿಯೇ ಇರುತ್ತಾನೆ.  ಆತ ಸತ್ತ ಮೇಲೂ ಆತನಿಗೆ ಕಿರಿಯ ಸೋದರರು ಇದ್ದರೆ ಅವರು  ಪಟ್ತಾಟಕ್ಯಿಕೆ ಅರ್ಹರಾಗುತ್ತಾರೆ. ಸತ್ತ ತಾಯಿಯ  ಮಗಳು ಅಂದರೆ ಅರಸನ ಸೋದರಿ ಆಸ್ತಿಯ ಉತ್ತರಾಧಿಕಾರಿಣಿ ಆಗುತ್ತಾಳೆ.  ಆಕೆ ಇವಳು 'ಪಟ್ಟ ಭಗಿನಿ.' ಇವಳ ಮಗ 'ಪಟ್ಟ ಭಗಿನೀಸುತ'  ಆಗುತ್ತಾನೆ. ಅಂದರೆ ಪಟ್ಟದರಸನ ಭಗಿನಿ ಪಟ್ಮದರಸನ ಸೋದರಿ. ನಿಯ ಮಗ.ಭಗಿನಿ ಅಂದರೆ ಸೋದರಿ.

152 ಪಟ್ಟದರಸನ ಭಗಿನಿ. ಪಟ್ಮದರಸನ ಸೋದರಿ.  'ಪಟ್ಟ ಭಗಿನೀಸುತ'   ಅಂದರೆ ಪಟ್ಟದರಸನ ಭಗಿನಿಯ  ಮಗ.ಭಗಿನಿ ಅಂದರೆ ಸೋದರಿ.

ತುಳುವೇತರರ ಪ್ರಕಾರ ಅಳಿಯ ಅಂದರೆ ಮಗಳ ಗಂಡ ಮಾತ್ರ. ಸೋದರಿಯ ಮಗನಿಗೆ ಸೋದರಿಯ ಎಮದು ಮಾತ್ರ ವಾಡಿಕೆಯಲ್ಲಿ ಕರೆಯುತ್ತಾರೆ. ಇಂತಹ ತಪ್ಪು ಈಗಾಗಲೇ ಡಾ. ಚಿದಾನಂದ ಮೂರ್ತಿಯವರಂತಹ ವಿದ್ವಾಂಸರಿಂದ ಆಗಿದೆ.
ಹೀಗಾಗಿ ತುಳು ಸಂಸ್ಕೃತಿಯ ಬಗ್ಗೆ ಬಿಡಿಸಿ ಹೇಳಬೇಕಾಗುತ್ತದೆ.

ಪು 154
ಪೆರಿಯಪ್ಯೆ -ತಾಯಿಯ   ಅಕ್ಕ. ಕೆಲವು ಸಂದರ್ಭದಲ್ಲಿ ತಾಯಿಯ ತಾಯಿಯೂ ಆಗುತ್ತಾಳೆ. ಹಿರಿತಾಯಿಯ ಮಕ್ಕಳಿಗೆ ಭಾಗವಾಗಿದ್ದರೆ ಹೆಣ್ಣು ಮಕ್ಕಳ ಹೆಸರಲ್ಲಿ ಇರುತ್ತಿತ್ತು. ಒಬ್ಬಳೇ ಮಗಳಾದರೆ ೊಬ್ಬಳೇ ಮಗಳ ಹೆಸರಲ್ಲಿ ಇರುತ್ತದೆ.

156 ಆಳುವ ಪಟ್ಟದ ನಾಮವನ್ನು ಆಧರಿಸಿ ತಂದೆ ಮಕ್ಕಳು ಎಂದು ಗುರುತಿಸುವುದು ತಪ್ಪು. ಉದಾಹರಣೆಗೆ ನಾನಯರ ಗರಡಿಯನ್ನೇ ತೆಗೆದುಕೊಳ್ಳಿ, ಬೆರ್ಮ ನಾನಯರ ಅಳಿಯ ಪರಮೆಶ್ವರ ನಾನಯ. ಆದರೆ ಇತಿಹಾಸಕಾರರು ಬರೇ ಉಪನಾಮವನ್ನು ಆಧರಿಸಿ ತಂದೆ ಮಗ  ಎಂದು ತೀರ್ಪು ನೀಡುತ್ತಾರೆ. ನಾನಯರ  ಮಗ ನಾನಯ  ಎಂದು. ಈ ವಿವರಗಳು ಅ. 8ರಲ್ಲಿ ಇವೆ.

158
ವೀರ ಪಾಂಡ್ಯನ  ಆಸ್ಥಾನದಲ್ಲಿ ಅಳಿಯ ಬಂಕಿದೇವ, ಮೈದುನ  ಒಡ್ಡಮದೇವ ಮತ್ತು ಮಾರದಮ್ಮ ಅಧಿಕಾರಿ....ನೀವು ಕೇಳುವ  ಉಳಿದ   ಇಬ್ಬರ ಬಗ್ಗೆ ವಿವರ  ಇಲ್ಲ. .

ಅದೇ ಪುಟ:   ಮೂಲ ಪಾಠ ಹೀಗಿದೆ: ಮಾತೃಮೂಲ (ಮೆಟ್ರಿಲಿನಿ) ಎಂದರೆ ತಾಐಇಯ ಪರಂಪರೆಯನ್ನು -ಯಾ ಮನೆತನವನ್ನು ಗುರುತಿಸುವುದು., ಗೋತ್ರ ಯಾ -ಮನೆತನದ  ಆಧಾರವನ್ನು ತಾಯಿಯ ಕುಲದ ಮೂಲಕ ಪರಿಗಣಿಸುವ ವಾಡಿಕೆ ಪ್ರಾಚೀನವಾದುದು. ಇಂತಹ ಪದ್ಧತಿಯನ್ನು ಇಸ್ಲಾಂ ಧರ್ಮ ಒಪ್ಪುವುದಿಲ್ಲ.  ಸಾಮಾನ್ಯವಾಗಿ ಹೆಚ್ಚಿನ ಕುಲಗೋತ್ರಗಳು ಪಿತೃಮೂಲವನ್ನು ಆಧರಿಸಿಕೊಂಡಿವೆ. ಭಾರತದಲ್ಲೂ ಪಿತೃಮೂಲ ಪದ್ಧತಿ ಇದೆ.ಇಸ್ಲಾಂ ಕೂಡಾ ಇದೇ ಪದ್ಧತಿಯನ್ನು ಬೆಂಬಲಿಸಿದೆ. ........ಉಳಿದ ಭಾಗ ನನ್ನ ಕೃತಿಯಲ್ಲಿ ಎಲ್ಲವೂ ಇದೆ. ಅಂದರೆ ಮಾತೃಮೂಲವನ್ನು ಹೇಗೆ ಇಲ್ಲಿಯ ಬ್ಯಾರಿಗಳು ಅಳವಡಿಸಿದ್ದರು ಎನ್ನುವುದರ ವಿವರಣೆಯನ್ನು ಇಚ್ಲಂಗೋಡು ಅವರು ಕೊಡಲು ಪ್ರಯತ್ನಿಸಿದ್ದಾರೆ.

161 ನೀವು ಹೇಳುವುದು ಸರಿ.A.C Burnell  ಅವರ ಹಸ್ತ  ಪ್ರತಿಯ ಕಾಲ 1894

162  ಶೀನಪ್ಪ ಹೆಗ್ಗಡೆಯವರ ಪ್ರಕಾರ ಭೂತಾಳ ಪಾಂಡ್ಯನು ದೇವ ಪಾಂಡ್ಯ  ಎಂಬ ಹಡಗು ವ್ಯಾಪಾರಿಯ ಮಗ. ದೇವ ಪಾಂಡ್ಯನ ಸೋದರಿ ಸತ್ಯವತಿ. ಈತನ ಮಗ ಜಯ ಪಾಂಡ್ಯ. ಈತನನ್ನು ಕುಂಡೋದರ ಭೂತಕ್ಕೆ ಬಲಿನೀಡಲು ವ್ಯವಸ್ಥೆ ಆಗುತ್ತದೆ. ಆದರೆ ಭೂತವು ಬಲಿಯನ್ನು ತಡೆಯುತ್ತದೆ. ಮುಂದೆ ಈ ಜಯಪಾಂಡ್ಯ ಭೂತಾಳ ಪಾಂಡ್ಯ    ಎಂಬ ಹೆಸರು ಪಡೆಯುತ್ತಾನೆ.

162 ಪಕ್ಷನಾಥರೆಂಬ ಚಿಟುಪಾಡಿ ಬಲ್ಲಾಳರು ನಿಡಿಂಬೂರು ಬಲ್ಲಾಲರು...ಮೂಲಪಾಠದಲ್ಲಿ  ಹಾಗೆಯೇ  ಇದೆ. ಬಹುಷ  ಇದು ಅವರ ಕುಲದ ಹೆಸರು ಅಥವಾ ಆ ಪಟ್ಟದ ಹೆಸರು ಇರಬಹುದು.
ಈ ಎರಡೂ ಬಲ್ಲಾಳರು ಬ್ರಾಹ್ಮಣರು ಆದ್ದರಿಂದ  ಇವರಿಗೆ ಗುರು ಮರ್ಯಾದೆ ಇದ್ದಿರಬೇಕು.

168...ಈ ಕಥೆ ದೀರ್ಘವಾಗಬಹುದೆಂದು ನಾನು ಸಂಕ್ಷಿಪ್ತ ಗೊಳಿಸಿದ್ದೆ.
ಕಥೆ ಹೀಗಿದೆ. ಸೇಸಿ ಸೆಡ್ತಿ ತಾಯಿ. ಮಗಳು ಸಿಂಧು ಸೆಡ್ತಿ ಸೇಸಿ ಸೆಡ್ತಿಯ ಸೋದರ ಪಟೇಲ ಗೋಪಾಲ ಸೆಟ್ಟಿ. ಈತ ತನ್ನ ಸೊಸೆ -ಸೀಂದುಗೆ  ತಾನು ಖರೀದಿಸಿದ  ಆಸ್ತಿ ನೀಡುವುದಾಗಿ ಆಕೆಯನ್ನು ಆಕೆಯ ಗಂಡನನ್ನೂ ಆಕೆಯ ಮಕ್ಕಳನ್ನೂ ಆಕೆಯ ತಾಯಿಯನ್ನೂ ಕರೆದು ತಾನು ಖರೀದಿಸಿದ  ಆಸ್ತಿ ನೀಡಿದ. ಆ ಆಸ್ತಿಯ ಮನೆಯಲ್ಲಿ ಇದ್ದು ಈ ಕುಟುಂಬ ಐದು ವರ್ಷಗಳ ಕಾಲ ಆಸ್ತಿಯನ್ನು ಅನುಭವಿಸಿದರು. ಆದರೆ ಒಂದು ದಿನ  ಆ ಅಸ್ತಿ ಆತನ ಮಡದಿ ಮಕ್ಕಳ ಹೆಸರಲ್ಲಿ ದಾಖಲಾಯಿತು. ಈ ಸತ್ಯ ಗೊತ್ತಾದ ಕೂಡಲೇ ಸೇಸಿಸೆಡ್ತಿ  ಒಲೆಯ ಮೇಲಿನ  ಅನ್ನದ ಮಡಕೆಯನ್ನು ಎತ್ತಿ ಒಗೆದು ಅಣ್ಣ ನೀಡಿ ಮನೆ ತೊರೆದು ಹೊರಟಿದ್ದರು.ಬೇರೊಂದು ಒಕ್ಕಲು ಮನೆಯಲ್ಲಿ ತಾತ್ಕಾಲಿಕ  ವಸತಿ ಮಾಡಿದ್ದರು.  ಮತ್ತೆ ತಿರುಗಿ ಸೋದರನ ಮುಖ ನೋಡಲಿಲ್ಲ.  ಆ ಸೋದರ ತನ್ನ ಮಡದಿ ಮಕ್ಕಳೊಂದಿಗೆ ಸಮೀಪದಲ್ಲಿ ಇದ್ದಿದ್ದರು. ಆತ ಸೋದರಿಯ ಮನೆಯ ಸುತ್ತ  ಓಡಾಡುತ್ತಾ ಇದ್ದರೂ ಈ  ತಾಯಿ ಮಕ್ಕಳು ಅವರನ್ನು  ಮಾತನಾಡಿಸಿರಲಿಲ್ಲ   ಆತನ ಮರಣಕ್ಕೂ, ಬೊಜ್ಜಕ್ಕೂ- ಯಾವ ಕೆಲಸಕ್ಕೂ ಹೋಗಲಿಲ್ಲ. ಆದರೆ ಇದರ  ದೋಷ  ಸೇಸಿ ಸೆಡ್ತಿ ಮತ್ತೆ ಮಕ್ಕಳಿಗೆ  ತಟ್ಟಿತಂತೆ. ಇವೆಲ್ಲ ನಂಬಿಕಗೆಗಳು.

172 ಎಲ್ಲಾ  ತುಳುವರಲ್ಲಿ ಧಾರೆಯ ಪದ್ಧತಿ ಹಿಂದೆ ಇರಲಿಲ್ಲ. ತುಳುವರ ಹೆಣ್ಣು ಗಂಡಿನ ವಂಶಕ್ಕೆ ಸೇರುವುದಿಲ್ಲ. ಧಾರೆ ಎರೆದು ಕೊಟ್ಟರೆ ಆ ಹೆಣ್ಣಿನ ಮೇಲೆ ತವರಿಗೆ   ಅಧಿಕಾರ  ಇರುವುದಿಲ್ಲ. ಇತು ಎಲ್ಲಾ ತುಳು ಜಾತಿಗಳ ಪದ್ಧತಿ. ಮುಂದೆ ಬ್ರಾಹ್ಮಣರ-ವೈದಿಕ ಪ್ರಭಾವದಿಂದ ನೀರ ಧಾರೆ ಎರೆಯುವ ಪದ್ಧತಿ ಆರಂಭವಾಯಿತು. ಆದರೆ ಇಲ್ಲ ಕನ್ಯಾ ದಾನದ  ಆಶಯ ಈಗಲೂ ಇಲ್ಲ. ಬರೇ ಅನುಕರಣೆ ಅಷ್ಟೆ. ತುಳುವೆರೆಗ್   " ನೀರ್ ಮೈಪುನು" ಪಂಡ  ಅಡೆಗೆ ಮುಗ್ಗಿಂಡ್. ಕಡ್ತ್ ದಕ್ಕಿಲೆಕ್ಕ. ನುಪ್ಪು ನೀರ್ ಕಡ್ಪುನಗ ನೀರ್ ಕಡ್ಪುನ ಕ್ರಮ  ಉಂಡು.

177 ಉಡುಪಿಯ ಉತ್ತರ ಭಾಗದಲ್ಲಿ ಕನ್ನಡ ಮಾತನಾಡುವವರಲ್ಲಿ ಎತ್ತರೆತ್ತರ ಬೆಳೆದ ಹುತ್ತಗಳನ್ನು ಸ್ವಾಮಿ ಮನೆಗಳೆಂದು ಕರೆಯುತ್ತಾರೆ. ಈ ಸ್ವಾಮಿಮನೆಗಳಿಗೆ ಮಾಡು ತರಚಿಸುವುದೂ ಇದೆ.  ಇತ್ತೀಚೆಗೆ ಕೆಲವೆಡೆ ತಾರಸಿ ಕೋಣೆ ಆಗಿದೆ. ಇದರ ೊಳಗೆ ಪಂಚ ದೈವಗಳ ಸಂಕೀರ್ಣ  ಇದೆ. ಇದು ಮೂಲ ಸ್ಥಾನ ಅಲ್ಲ. ಮೂಲ ಸ್ಥಾನ ಅಂದರೆ ಅದು ಹುಟ್ಟಿನ ಚಿತ್ತೇರಿ ಅಲ್ಲಿ ನಾಗ ಬಿರ್ಮೆರ್ ಇದೆ. ಸ್ವಾಮಿ ಅಂದರೂ ನಾಗ.

181 "ಪೊದ್ದನಿಗೆ ಒಂದು ಬಾಲೆಯಲ್ಲಿ  ಪಿಂಗಾರ ಮತ್ತು ಗಂಧವನ್ನು ಇಟ್ಕೊಟು ದರ್ಶನ ಪಾತ್ರಿ ಕೊಡುತ್ತಾರೆ. ಪೊದ್ದ  ಇದನ್ನು ಗಂಧ  ಎಂದು ಹಾಕಬಹುದು. ಆದರೆ . ಇದು ಗೌರವ. ಆತ  ತನ್ನ ಮನೆಯ ದೈವದಲ್ಲಿ ಪ್ರಸಾದ ಪಡೆಯುತ್ತಾನೆ.

 ನನ್ನ  ಕೃತಿ ಪು. 177  ನಿಮ್ಮ ಪು. 28 -6 chapter

ಆಲದ ಬಿರ್ಮೆರ್  ಎನ್ನುವುದು ಪಂಚ ದೈವಗಳ ಕ್ಷೇತ್ರ,  ಇಲ್ಲಿ ಆಲದ ಮರ ಇರಬಹುದು ಇಲ್ಲದೆ ಇರಬಹುದು. ಆಲಆಂದರೆ ನೀರು ಇರುವ ಪ್ರದೇಶ.  ಸಾಂತೂರಿನಲ್ಲಿ ಆಲದ ಬಿರ್ಮೆರ್ ಎನ್ನುವ ನಾಗ ಬಿರ್ಮೆರ ಕ್ಷೇತ್ರ  ಇದೆ. ಇಲ್ಲಿ 12 ವರ್ಷಕ್ಕೆ ಒಮ್ಮೆ ಕೋಲ ನಡೆಯುತ್ತದೆ. ಐದು ಮನೆಗಳ ದೈವಗಳ ಭಂಡಾರ ಬರುತ್ತದೆ. ಜುಮಾದಿ ಒಂದು ಮಾತ್ರ ರಾತ್ರಿ ಉಳಿಯಬಾರದಂತೆ. ಕಾರಣ  ಅದು ಹೆಣ್ಣು ದೈವವಂತೆ.  ಇಲ್ಲಿ ದೈವವಾದರೂ ಅದನ್ನು ಹೆಣ್ಣೆಂದು ಪರಿಭಾವಿಸಿ ಮಾಡುವ  ಅಚರಣೆಯ ಗಮನಿಸುವಂತಹುದು. ನನಗೆ ತಿಳಿದಂತೆ ಅಲ್ಲಿಗೆ ಬರುವ ಕೊಡಮಣಿತ್ತಾಯಿಯೂ ಹೆಣ್ಣು ದೈವ.  ಅದು ರಾತ್ರಿ ಉಳಿಯುತ್ತದೆ.

Friday, July 8, 2011

ಕೊಟ್ಟಾರಿಗಳು

ಕೊಟ್ಟಾರಿಯವರೇ
ನೀವು ನೀಡಿರುವ ಐತಿಹ್ಯ ನಮ್ಮ ಅಧ್ಯಯನವನ್ನು ಸಮರ್ಥಿಸುತ್ತದೆ.

ಒಳ್ಳೆಯ ಮಾಹಿತಿ ನೀಡಿದುದಕ್ಕೆ ಧನ್ಯವಾದಗಳು.

ಕೊಟ್ಟಾರಿಗಳು

ಕೊಟ್ಟಾರಿಯವರೇ,

ನಾನು ವಿವರಿಸಿರುವುದು ಐತಿಹ್ಯವನ್ನಲ್ಲ. ವಾಸ್ತವವನ್ನು. ಶೀನಪ್ಪ ಹೆಗ್ಗಡೆಯವರು ಬರೆದುದನ್ನು ನಾವು ಊಹೆಯಾಗಿ ಪರಿಗಣಿಸಿ   ಮುಂದಿನ ಅಧ್ಯಯನ ನಡೆಸಬೇಕಾಗುತ್ತದೆ. ಬಾರಗರಿಂದ ಕೊಟ್ಟಾರಿಗಳು ಎನ್ನುವುದನ್ನು ಒಪ್ಪಲು ಕಷ್ಟವಾಗುತ್ತದೆ. ಅದಕ್ಕೆ ಈಗಿರುವ ಆಧಾರ ಸಾಲದು.

Thursday, July 7, 2011

ಕೊಟ್ಟಾರಿಗಳು ಹೆಚ್ಚಿನ ಮಾಹಿತಿ

ಕೊಟ್ಟಾರಿಗಳು ದಲಿತರಲ್ಲ. ವಿದೇಶಿ ಪ್ರವಾಸಿಗರು ಬರೆದಿದ್ದರೆ ಅವರ ದುಭಾಷಿ ಬ್ರಾಹ್ಮಣರಾಗಿರಬಹುದು.
ಕೊಟ್ಟಾರಿಗಳು ಬಂಟರ ಮನೆಯಲ್ಲಿ ಅಡುಗೆಯನ್ನೂ ಮಾಡುತ್ತಿದ್ದರು. ಉದಾಹರಣೆಗೆ ಕುಂದಾಪುರ  ಎಡ್ತರೆ ಮನೆ. ಬಹುಷಃ ಈ ಮಾಹಿತಿಯನ್ನು ನನ್ನ "ಬಂಟರು....ಕೃತಿಯಲ್ಲಿ ದಾಖಲಿಸಿರಬೇಕು. ಕಾಸರಗೋಡು ಮತ್ತು ಕುಂದಾಪುರದಲ್ಲಿ ಈ ಜನವರ್ಗ  ಇದ್ದಾರೆ. ಶ್ರೀ ಮಂತ ಬಂಟರ ಮತ್ತು ಹಿಂದೂ ಸಾಮಂತ ಬಲ್ಲಾಳರ ಮನೆಗಳಲ್ಲಿ ಇವರು ಅಡುಗೆಯನ್ನೂ ಮಾಡುತ್ತಿದ್ದರು ಎನ್ನುವುದು ಸತ್ಯ ಸಂಗತಿ.

Tuesday, July 5, 2011

ಕೊಟ್ಟಾರಿಗಳು

ರಕ್ಷಾರವರೇ
ನಿಮ್ಮ ಅಧ್ಯಯನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದುವರಿಸಿ. ಕೊಟ್ಟಾರಿ ವರ್ಗ ನನಗೆ ಕಂಡು ಬಂದಿರುವುದು ಮಂಗಳೂರಿನಿಂದ ದಕ್ಷಿಣಕ್ಕೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೊಟ್ಟಾರರು ಬಂಟರ ಜೊತೆವಿಲೀನವಾಗಿದ್ದಾರೆ ಎಂಬ ಮಾಹಿತಿನನಗೆ ದೊರೆತಿತ್ತು. ಹಾಗೆಯೇ ಬರೆದಿದ್ದೇನೆ. ಅಲ್ಲದೆ ವಿಟ್ಲದ ಕೊಟ್ಟಾರಿ ಪದಗ್ರಹಣ (ವಿಟ್ಲ ಸೀಮೆಯ ಕೊಟ್ಟಾರದ ಅಧಿಕಾರಿ) ಮಾಡಿದವರು ಕೊಟ್ಟಾರ ಸಮುದಾಯದವರು ಎಂಬುದನ್ನೂ ಉಲ್ಲೇಖಿಸಿದ್ದೇನೆ.  ನಿಮ್ಮ ೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಕೊಟ್ಟಾರ ಜನಾಂಗದ ಸಾಂಸ್ಕೃತಿಕ ಅಧ್ಯಯನ ಮಾಡಬೇಕಾಗುತ್ತದೆ. ಸದ್ಯ ನನ್ನಿಂದ ಸಾಧ್ಯವಾಗದು.
ಜನಾಂಗದ ವಿಷಯ ಅಧ್ಯಯನ ಮಾಡುವಾಘ ಕೆಲವು ಗೊಂದಲಗಳು ಉಂಟಾಗುತ್ತವೆ. ಆ ಗೊಂದಲ ಬಂಟರಲ್ಲೂ ಇದೆ.
ನಿಮ್ಮ ಪ್ರಶ್ನೆ 1
ಕೊಟ್ಟಾರಿಗಳು ವಲಸೆ ಬಂದವರೇ.
ಇದಕ್ಕೆ ಉತ್ತರ ಅಧ್ಯಯನದಿಂದ ಹೊರಬೀಳಬೇಕಾಗಿದೆ. ಅವರು ಅಳಿಯ ಸಂತಾನದವರೇ, ಅಗೆಲ್ ಬಡಿಸುವ, ಬಳಿ ನೋಡುವ ಪದ್ದತಿ ಮಾಯಿಯ ಮೂಲದವೇ ಎಂಬುದನ್ನು ಕಂಡು ಹಿಡಿಯಬೇಕು. ಆದರೂ ಇವರು ಬಂಟರಲ್ಲಿ ವಿಲೀನರಾದ್ದಾರೆ ಎಂಬ ಹೇಳಿಕೆ ಇರುವುದರಿಂದ ಅವರು ವಲಸೆ ಬಂದಿರುವರು ಅಲ್ಲ ಎನ್ನುವುದು ನನ್ನ ಭಾವನೆ.

2 Madras District Manualsನಲ್ಲಿ ಈ ಸಮುದಾಯದ ಮುಖ್ಯಸ್ಥ ’ಕೊಟ್ಟಾರಿ’ ಹಾಗೂ ಮುಂಡಾಲ ಸಮಾಜದ ಮುಖ್ಯಸ್ಥ ’ಮುಖಾರಿ’ಯ ಉಲ್ಲೇಖದ ಸಂದರ್ಭದಲ್ಲಿ ಈ ಎರಡೂ ಸಮುದಾಯಗಳನ್ನು ಜೊತೆಯಾಗಿ ಗುರುತಿಸಲಾಗಿದೆ. 
ಇದು ತಪ್ಪಿರಬಹುದು. ಸಾಮಾಂತ ಬಲ್ಲಾಳರ ಮತ್ತು ಬಂಟರ ಮನೆಗಳ ಕೊಟ್ಯದಲ್ಲಿ ಇರುವವರು ಕೊಟ್ಟಾರದವರು. ಇವರು ಬಂಟರ ಮತ್ತು ಸಾಮಾಂತ ಬಲ್ಲಾಳರ  ಮನೆಗಳ  ಒಳಗಿನ ಕೆಲಸವನ್ನೂ ಮಾಡುತ್ತಿದ್ದರು. ನಾನು ಗೊತ್ತಿದ್ದು ನನ್ನ ಕೃತಿಯಲ್ಲಿ ದಾಖಲಿಸದೇ ಇರುವ ವಿಷಯ ಎಂದರೆ ವಾಸದ ಕೊಟ್ಟಾರಿಗಳಿಗೂ ಆಯಾ ಗುತ್ತು ಬೀಡಿನ ಬಂಟ ಬಲ್ಲಾಳಿರಿಗೂ ದೈಹಿಕ ಸಂಬಂಧವೂ ಇರುತ್ತಿತ್ತು ಎಂಬುದನ್ನು. ಅಂತಹ ಮಹಾನುಭಾವನೊಬ್ಬ ಕೊಟ್ಟಾರಿ ಪ್ರೇಯಸಿಯಿಂದ ಜನಿಸಿದ ತನ್ನ ಹೆಣ್ಣು ಮಕ್ಕಳಿಗೂ ಬಂಟ ಗಂಡನ್ನೇ ನೋಡಿ ಮದುವೆಯಾಡಿದ್ದರು.

ಪ್ರಶ್ನೆ : ಅತ್ಯಂತ ಕೆಳಸ್ತರದಲ್ಲಿದ್ದ ಕೊಟ್ಟಾರಿಗಳನ್ನು ಬಾರಗರಂತಹ ಮೇಲ್ವರ್ಗದವರು ಅಂದಿನ ಕಾಲದಲ್ಲಿ ತಮ್ಮದೇ ವಾಸಸ್ಥಾನದ ಸಂಕೀ‍ರ್ಣದೊಳಗೆಯೇ ವಾಸಿಸಲು ಅನುವು ಮಾಡಿದ್ದುದು ಸಾಧ್ಯವಿತ್ತೇ ?
ನೀವು ಕೋಟೆದ ಬಬ್ಬು ಪಾಡ್ದನ ಗಮನಿಸಿ ಅವನ ತಾಯಿ  ಕಚ್ಚೂರ ಮಾಲ್ದಿ ಕಚ್ಚೂರು ಅರಮನೆಯಲ್ಲಿ ಬೆಳೆದವಳು. ಬಾರಗರು ಸಾಕಿದ ಬಬ್ಬು ಕೂಡಾ ಬಾರಗನೆಂದು ಕರೆಸಿಕೊಮಡ. ಆ ಪಾಡ್ದನವನ್ನು ಒಮ್ಮ ಓದಿ ನೋಡಿ.
ಕೋಟಿ ಚೆನ್ನಯರು ಜನಿಸಿದ್ದು ಬೀಡಿನ ಒಳಗೆ  ಕೋಣೆಯಲ್ಲಿ. ಇಂದು ಇದು ಸಾಧ್ಯವೇ? ಬಂಟರಾಗಲೀ ಜೈನರಾಗಲೀ ಬೀಡಿನ ಒಳಗೆ ಹೆರಿಗೆ ಆಗುವಂತಿಲ್ಲ. 
ಪ್ರ ಕೊರಗರು ’ಕೊಟ್ಟ’ದಲ್ಲಿ ವಾಸಿಸಿದರೆ, ಕೊಟ್ಟಾರಿಗಳು ’ಕೊಟ್ಯ’ದಲ್ಲಿ ವಾಸಿಸುತ್ತಾರೆ. ಇಂದಿಗೂ ಈ ಎರಡು ಸಮುದಾಯಗಳಲ್ಲಿ ’ಕೊಟ್ಟಗ್ ಕೊಟ್ಯ ಮುಟ್ಟ. ಕೊರಗೆರೆಗ್ ಕೊಟ್ಟಾರ್‍ಲು ಮುಟ್ಟ’ ಎಂಬ ಮಾತು ಪ್ರಚಲಿತದಲ್ಲಿದೆ.
 ಉ ಇದೆಲ್ಲ ವ್ಯಂಗಗಳು ಸಮುದಾಯಗಳಲ್ಲಿ ಸಾಮಾನ್ಯ.

 ಪ್ರಶ್ನೆ : ಈ ಕೊಟ್ಟಾರಿ ’ಬೂಡು ಬಂಟ’ರೇ ಆಗಿದ್ದಲ್ಲಿ, ಬಂಟ ಜನಾಂಗದ ವೀರಪುರುಷ ’ದೇವುಪೂಂಜ’ನ ಚರಿತ್ರೆಯಲ್ಲಿ ಬರುವ ಆತನ ಭಾವ, ಮಂಜಣ ಪೂಂಜನ ಸೋದರಳಿಯ ’ದೇಲಮು / ದಾರಮು ಕೊಟ್ಟಾರಿ’ಯೂ ಬೂಡುಬಂಟನೇ ? ’ಕೊಟ್ಟಾರಿ’ ಎಂಬ ಗಡಿನಾಮ ಹಲವಾರು ದೈವಗಳ ಪಾಡ್ದನಗಳಲ್ಲಿ ಕಂಡುಬರುತ್ತದೆ. ಅವರೆಲ್ಲಾ ಬೂಡು ಬಂಟರೇ ?
ಊತ್ತರ: ದೇವು ಪೂಂಜ ಪಾಡ್ದನದ ಕೊಟ್ಟಾರಿ ಬಂಟನೂ ಆಗಿರಬೇಕು. ಆದರೆ ಬಂಟರು ಮಾತ್ರವಲ್ಲ ಜೈನರಲ್ಲೂ ಕೊಟ್ಟಾರಿ ಗಡಿನಾಮ ಇದೆಮಾತ್ರವಲ್ಲ ಅವರಲ್ಲಿ ಕೊಟ್ಟಾರಿ ಉಪನಾಮವೂ ರೂಢಿಯಲ್ಲಿದೆ.

ಪ್ರ: ಚುನಾವಣೆಗಳಲ್ಲಿ ’ಜಾತಿ ಬಲ’ವೂ ಪ್ರಮುಖ ಅಂಶವಾಗಿರುವ ಇಂದಿನ ದಿನಗಳಲ್ಲಿ, ಅತ್ಯಂತ ಕಡಿಮೆ ಜನಸಂಖ್ಯೆಯ, ನಿಮ್ನಸ್ತರದಲ್ಲಿದ್ದು ಚಾಕರಿವರ್ಗ ಎಂದೇ ಬಿಂಬಿತವಾಗಿರುವ ’ಕೊಟ್ಟಾರಿ’ ಸಮುದಾಯ ಇಂದು ರಾಜಕೀಯದಲ್ಲಿ ಮಿಂಚುತ್ತಿರಲು ಜೈನ, ಬಂಟ-ಬಾರಗರೇ ಪರೋಕ್ಷ ಕಾರಣರಾಗಿದ್ದಿರಬಹುದೇ ? 
ಇದು ಭಾಗಃಶ ಸರಿ ಇರಬಹದು. ಆದರೆ ಮೀಸಲಾತಿಯ ಲಾಭಕ್ಕಾಗಿ ಅನೇಕ ಜನಾಂಗದವರು ತಾವು ಹಿಂದುಳಿದವರು ದಲಿತರು ಎಂದು ಮೀಸಲಾತಿಯಲ್ಲಿ ಪಟ್ಟಿಯಲ್ಲಿ ಸೇರಲು ಲಾಭಿ ಮಾಡಿಕೊಳ್ಳುತ್ತಿದ್ದಾರೆ. ಇದು ಜಾತಿ ಸಮಸ್ಯೆ ಬೆಳೆಯಲೂ ಕಾರಣವಾಗಿದೆ. ಬಂಟರಲ್ಲಿಯೂ ಹಿಂದುಳಿದವರ ಪಟ್ಟಿಯಲ್ಲಿ ಸೇರಬೇಕೇಂಬ ಒತ್ತಡ ಇತ್ತು. ಆದರೆ"ನಾವು ಹಿಂದುಳಿಯುವುದು ಬೇಡ. ಮುಂದುವರಿಯುತ್ತಾ ಇರೋಣ" ಎಂಬ ಹಿರಿಯರ ಬೋಧನೆ ಇಲ್ಲಿ ಕೆಲಸಮಾಡಿರಬೇಕು.



Saturday, January 15, 2011

TuLu Studies: 213. Kotrupādi

TuLu Studies: 213. Kotrupādi


Kottara is a place in near Manglore also.

1 ಕೊಟ್ಟಾರ ಅಂದರೆ ಭಂಡಾರ ಸ್ಥಳ. ಪಾಳೆಯಗಾರಿಕೆಯ ಕಾಲದಲ್ಲಿ ಬಹುಷಃ ಆಯುಧಾಗಾರವಾಗಿದ್ದಿರಬಹುದು. ಬೀಡಿನಲ್ಲಿ ಮಾತ್ರ ಕೊಟ್ಟಾರದವರು ಇದ್ದರು. ಇವರ ಅಧಿಕಾರ ದ್ಯೋತಕ ಹೆಸರು ಕೊಟ್ಟಾರಿ/ಕೊಟ್ಟಾಲ್ರು. ಇವರು ಬಂಟರು ಮತ್ತು ಜೈನರು.

2 ಇಷ್ಟಲ್ಲದೆ ಇಂತಹ ಬೀಡಿನ ಕೊಟ್ಟಾರಗಳಲ್ಲಿ ಇರುವ ಜನಾಂಗವೊಂದು ಕೊಟ್ಟಾರಿ ಜಾತಿಯಾಗಿ ಮುಂದುವರಿದಿದೆ. ಈ ಬಗ್ಗೆ ಹೆಚ್ಚಿನ ವಿವರಣೆ ಇಂದಿರಾ ಹೆಗ್ಗಡೆಯವರ ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನ(2004 ಪ್ರ.ಕನ್ನಡ ಪುಸ್ತಕ ಪ್ರಾಧಿಕಾರ )ದಲ್ಲಿ ಪು.10ರಲ್ಲಿ ಹಾಗೂ 277ರಲ್ಲಿದೆ ಇದೆ.

3 ಕೋಯಿಲ್ ಕೊಲ್ಲೂರು-ಈ ಪದಗಳು ದ್ರಾವಿಡ ಮೂಲದವು. ಅಂದರೆ ಮಂದಿರ. ಕೋಯಿಲ ಇರುವ ಊರು ಕೊಲ್ಲೂರು. ಪ್ರಸಿದ್ಧ ಕೊಲ್ಲೂರು ದೇವಸ್ಥಾನ ಅಲ್ಲದೆ ಮುಲ್ಕಿ ಸೀಮೆಯಲ್ಲೂ ಒಂದು ಕೊಲ್ಲೂರು ಇದೆ. ಇಲ್ತಲಿಯೂ ದೇವಿ ಮಂದಿರ ಇದೆ.

ಇಂದಿಗೂ ಮಲಯಾಲದಲ್ಲಿ ಕೊಇಲ ಎಂದೇ ಮಂದಿರವನ್ನು ಕರೆಯುತ್ತಾರೆ. ಬಹುಷ ತುಳುವರ ಉಪಾಸನೆ 'ಕೋಲ' ಎಂಬ ನರ್ತನ ಸೇವೆಯ ಪದವೂ ಈ ಮೂಲದಿಂದ ಬಂದಿರಬಹುದೆ?

4 ಕೊಟ್ಟ ಎನ್ನುವುದು ದಲಿತರ ವಾಸದ ಸ್ಥಳ ಕೂಡಾ. ಮುಂಡಾಲರು ಮತ್ತು ಕೊರಗರು ವಾಸಿಸುವ ಸ್ಥಳ ಕೊಪ್ಪ/ಕೊಟ್ಟ.

ಡಾ. ಇಂದಿರಾ ಹೆಗ್ಗಡೆ

ಗುರಿ

ಸಂಸಾರ ಬೊಲ್ಲವಿದು
ಗುರಿ ಇಹುದು ಕಡಲಲ್ಲಿ
ಇಲ್ಲಿಲ್ಲ ನಮ್ಮಿಚ್ಚೆ
ಹರಿವಲ್ಲಿ ಹರವೆವು
ಗುರಿಯಲ್ಲಿ ಸೇರುವೆವು