Tuesday, July 5, 2011

ಕೊಟ್ಟಾರಿಗಳು

ರಕ್ಷಾರವರೇ
ನಿಮ್ಮ ಅಧ್ಯಯನ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಮುಂದುವರಿಸಿ. ಕೊಟ್ಟಾರಿ ವರ್ಗ ನನಗೆ ಕಂಡು ಬಂದಿರುವುದು ಮಂಗಳೂರಿನಿಂದ ದಕ್ಷಿಣಕ್ಕೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಕೊಟ್ಟಾರರು ಬಂಟರ ಜೊತೆವಿಲೀನವಾಗಿದ್ದಾರೆ ಎಂಬ ಮಾಹಿತಿನನಗೆ ದೊರೆತಿತ್ತು. ಹಾಗೆಯೇ ಬರೆದಿದ್ದೇನೆ. ಅಲ್ಲದೆ ವಿಟ್ಲದ ಕೊಟ್ಟಾರಿ ಪದಗ್ರಹಣ (ವಿಟ್ಲ ಸೀಮೆಯ ಕೊಟ್ಟಾರದ ಅಧಿಕಾರಿ) ಮಾಡಿದವರು ಕೊಟ್ಟಾರ ಸಮುದಾಯದವರು ಎಂಬುದನ್ನೂ ಉಲ್ಲೇಖಿಸಿದ್ದೇನೆ.  ನಿಮ್ಮ ೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಕೊಟ್ಟಾರ ಜನಾಂಗದ ಸಾಂಸ್ಕೃತಿಕ ಅಧ್ಯಯನ ಮಾಡಬೇಕಾಗುತ್ತದೆ. ಸದ್ಯ ನನ್ನಿಂದ ಸಾಧ್ಯವಾಗದು.
ಜನಾಂಗದ ವಿಷಯ ಅಧ್ಯಯನ ಮಾಡುವಾಘ ಕೆಲವು ಗೊಂದಲಗಳು ಉಂಟಾಗುತ್ತವೆ. ಆ ಗೊಂದಲ ಬಂಟರಲ್ಲೂ ಇದೆ.
ನಿಮ್ಮ ಪ್ರಶ್ನೆ 1
ಕೊಟ್ಟಾರಿಗಳು ವಲಸೆ ಬಂದವರೇ.
ಇದಕ್ಕೆ ಉತ್ತರ ಅಧ್ಯಯನದಿಂದ ಹೊರಬೀಳಬೇಕಾಗಿದೆ. ಅವರು ಅಳಿಯ ಸಂತಾನದವರೇ, ಅಗೆಲ್ ಬಡಿಸುವ, ಬಳಿ ನೋಡುವ ಪದ್ದತಿ ಮಾಯಿಯ ಮೂಲದವೇ ಎಂಬುದನ್ನು ಕಂಡು ಹಿಡಿಯಬೇಕು. ಆದರೂ ಇವರು ಬಂಟರಲ್ಲಿ ವಿಲೀನರಾದ್ದಾರೆ ಎಂಬ ಹೇಳಿಕೆ ಇರುವುದರಿಂದ ಅವರು ವಲಸೆ ಬಂದಿರುವರು ಅಲ್ಲ ಎನ್ನುವುದು ನನ್ನ ಭಾವನೆ.

2 Madras District Manualsನಲ್ಲಿ ಈ ಸಮುದಾಯದ ಮುಖ್ಯಸ್ಥ ’ಕೊಟ್ಟಾರಿ’ ಹಾಗೂ ಮುಂಡಾಲ ಸಮಾಜದ ಮುಖ್ಯಸ್ಥ ’ಮುಖಾರಿ’ಯ ಉಲ್ಲೇಖದ ಸಂದರ್ಭದಲ್ಲಿ ಈ ಎರಡೂ ಸಮುದಾಯಗಳನ್ನು ಜೊತೆಯಾಗಿ ಗುರುತಿಸಲಾಗಿದೆ. 
ಇದು ತಪ್ಪಿರಬಹುದು. ಸಾಮಾಂತ ಬಲ್ಲಾಳರ ಮತ್ತು ಬಂಟರ ಮನೆಗಳ ಕೊಟ್ಯದಲ್ಲಿ ಇರುವವರು ಕೊಟ್ಟಾರದವರು. ಇವರು ಬಂಟರ ಮತ್ತು ಸಾಮಾಂತ ಬಲ್ಲಾಳರ  ಮನೆಗಳ  ಒಳಗಿನ ಕೆಲಸವನ್ನೂ ಮಾಡುತ್ತಿದ್ದರು. ನಾನು ಗೊತ್ತಿದ್ದು ನನ್ನ ಕೃತಿಯಲ್ಲಿ ದಾಖಲಿಸದೇ ಇರುವ ವಿಷಯ ಎಂದರೆ ವಾಸದ ಕೊಟ್ಟಾರಿಗಳಿಗೂ ಆಯಾ ಗುತ್ತು ಬೀಡಿನ ಬಂಟ ಬಲ್ಲಾಳಿರಿಗೂ ದೈಹಿಕ ಸಂಬಂಧವೂ ಇರುತ್ತಿತ್ತು ಎಂಬುದನ್ನು. ಅಂತಹ ಮಹಾನುಭಾವನೊಬ್ಬ ಕೊಟ್ಟಾರಿ ಪ್ರೇಯಸಿಯಿಂದ ಜನಿಸಿದ ತನ್ನ ಹೆಣ್ಣು ಮಕ್ಕಳಿಗೂ ಬಂಟ ಗಂಡನ್ನೇ ನೋಡಿ ಮದುವೆಯಾಡಿದ್ದರು.

ಪ್ರಶ್ನೆ : ಅತ್ಯಂತ ಕೆಳಸ್ತರದಲ್ಲಿದ್ದ ಕೊಟ್ಟಾರಿಗಳನ್ನು ಬಾರಗರಂತಹ ಮೇಲ್ವರ್ಗದವರು ಅಂದಿನ ಕಾಲದಲ್ಲಿ ತಮ್ಮದೇ ವಾಸಸ್ಥಾನದ ಸಂಕೀ‍ರ್ಣದೊಳಗೆಯೇ ವಾಸಿಸಲು ಅನುವು ಮಾಡಿದ್ದುದು ಸಾಧ್ಯವಿತ್ತೇ ?
ನೀವು ಕೋಟೆದ ಬಬ್ಬು ಪಾಡ್ದನ ಗಮನಿಸಿ ಅವನ ತಾಯಿ  ಕಚ್ಚೂರ ಮಾಲ್ದಿ ಕಚ್ಚೂರು ಅರಮನೆಯಲ್ಲಿ ಬೆಳೆದವಳು. ಬಾರಗರು ಸಾಕಿದ ಬಬ್ಬು ಕೂಡಾ ಬಾರಗನೆಂದು ಕರೆಸಿಕೊಮಡ. ಆ ಪಾಡ್ದನವನ್ನು ಒಮ್ಮ ಓದಿ ನೋಡಿ.
ಕೋಟಿ ಚೆನ್ನಯರು ಜನಿಸಿದ್ದು ಬೀಡಿನ ಒಳಗೆ  ಕೋಣೆಯಲ್ಲಿ. ಇಂದು ಇದು ಸಾಧ್ಯವೇ? ಬಂಟರಾಗಲೀ ಜೈನರಾಗಲೀ ಬೀಡಿನ ಒಳಗೆ ಹೆರಿಗೆ ಆಗುವಂತಿಲ್ಲ. 
ಪ್ರ ಕೊರಗರು ’ಕೊಟ್ಟ’ದಲ್ಲಿ ವಾಸಿಸಿದರೆ, ಕೊಟ್ಟಾರಿಗಳು ’ಕೊಟ್ಯ’ದಲ್ಲಿ ವಾಸಿಸುತ್ತಾರೆ. ಇಂದಿಗೂ ಈ ಎರಡು ಸಮುದಾಯಗಳಲ್ಲಿ ’ಕೊಟ್ಟಗ್ ಕೊಟ್ಯ ಮುಟ್ಟ. ಕೊರಗೆರೆಗ್ ಕೊಟ್ಟಾರ್‍ಲು ಮುಟ್ಟ’ ಎಂಬ ಮಾತು ಪ್ರಚಲಿತದಲ್ಲಿದೆ.
 ಉ ಇದೆಲ್ಲ ವ್ಯಂಗಗಳು ಸಮುದಾಯಗಳಲ್ಲಿ ಸಾಮಾನ್ಯ.

 ಪ್ರಶ್ನೆ : ಈ ಕೊಟ್ಟಾರಿ ’ಬೂಡು ಬಂಟ’ರೇ ಆಗಿದ್ದಲ್ಲಿ, ಬಂಟ ಜನಾಂಗದ ವೀರಪುರುಷ ’ದೇವುಪೂಂಜ’ನ ಚರಿತ್ರೆಯಲ್ಲಿ ಬರುವ ಆತನ ಭಾವ, ಮಂಜಣ ಪೂಂಜನ ಸೋದರಳಿಯ ’ದೇಲಮು / ದಾರಮು ಕೊಟ್ಟಾರಿ’ಯೂ ಬೂಡುಬಂಟನೇ ? ’ಕೊಟ್ಟಾರಿ’ ಎಂಬ ಗಡಿನಾಮ ಹಲವಾರು ದೈವಗಳ ಪಾಡ್ದನಗಳಲ್ಲಿ ಕಂಡುಬರುತ್ತದೆ. ಅವರೆಲ್ಲಾ ಬೂಡು ಬಂಟರೇ ?
ಊತ್ತರ: ದೇವು ಪೂಂಜ ಪಾಡ್ದನದ ಕೊಟ್ಟಾರಿ ಬಂಟನೂ ಆಗಿರಬೇಕು. ಆದರೆ ಬಂಟರು ಮಾತ್ರವಲ್ಲ ಜೈನರಲ್ಲೂ ಕೊಟ್ಟಾರಿ ಗಡಿನಾಮ ಇದೆಮಾತ್ರವಲ್ಲ ಅವರಲ್ಲಿ ಕೊಟ್ಟಾರಿ ಉಪನಾಮವೂ ರೂಢಿಯಲ್ಲಿದೆ.

ಪ್ರ: ಚುನಾವಣೆಗಳಲ್ಲಿ ’ಜಾತಿ ಬಲ’ವೂ ಪ್ರಮುಖ ಅಂಶವಾಗಿರುವ ಇಂದಿನ ದಿನಗಳಲ್ಲಿ, ಅತ್ಯಂತ ಕಡಿಮೆ ಜನಸಂಖ್ಯೆಯ, ನಿಮ್ನಸ್ತರದಲ್ಲಿದ್ದು ಚಾಕರಿವರ್ಗ ಎಂದೇ ಬಿಂಬಿತವಾಗಿರುವ ’ಕೊಟ್ಟಾರಿ’ ಸಮುದಾಯ ಇಂದು ರಾಜಕೀಯದಲ್ಲಿ ಮಿಂಚುತ್ತಿರಲು ಜೈನ, ಬಂಟ-ಬಾರಗರೇ ಪರೋಕ್ಷ ಕಾರಣರಾಗಿದ್ದಿರಬಹುದೇ ? 
ಇದು ಭಾಗಃಶ ಸರಿ ಇರಬಹದು. ಆದರೆ ಮೀಸಲಾತಿಯ ಲಾಭಕ್ಕಾಗಿ ಅನೇಕ ಜನಾಂಗದವರು ತಾವು ಹಿಂದುಳಿದವರು ದಲಿತರು ಎಂದು ಮೀಸಲಾತಿಯಲ್ಲಿ ಪಟ್ಟಿಯಲ್ಲಿ ಸೇರಲು ಲಾಭಿ ಮಾಡಿಕೊಳ್ಳುತ್ತಿದ್ದಾರೆ. ಇದು ಜಾತಿ ಸಮಸ್ಯೆ ಬೆಳೆಯಲೂ ಕಾರಣವಾಗಿದೆ. ಬಂಟರಲ್ಲಿಯೂ ಹಿಂದುಳಿದವರ ಪಟ್ಟಿಯಲ್ಲಿ ಸೇರಬೇಕೇಂಬ ಒತ್ತಡ ಇತ್ತು. ಆದರೆ"ನಾವು ಹಿಂದುಳಿಯುವುದು ಬೇಡ. ಮುಂದುವರಿಯುತ್ತಾ ಇರೋಣ" ಎಂಬ ಹಿರಿಯರ ಬೋಧನೆ ಇಲ್ಲಿ ಕೆಲಸಮಾಡಿರಬೇಕು.



No comments:

Post a Comment