Thursday, July 7, 2011

ಕೊಟ್ಟಾರಿಗಳು ಹೆಚ್ಚಿನ ಮಾಹಿತಿ

ಕೊಟ್ಟಾರಿಗಳು ದಲಿತರಲ್ಲ. ವಿದೇಶಿ ಪ್ರವಾಸಿಗರು ಬರೆದಿದ್ದರೆ ಅವರ ದುಭಾಷಿ ಬ್ರಾಹ್ಮಣರಾಗಿರಬಹುದು.
ಕೊಟ್ಟಾರಿಗಳು ಬಂಟರ ಮನೆಯಲ್ಲಿ ಅಡುಗೆಯನ್ನೂ ಮಾಡುತ್ತಿದ್ದರು. ಉದಾಹರಣೆಗೆ ಕುಂದಾಪುರ  ಎಡ್ತರೆ ಮನೆ. ಬಹುಷಃ ಈ ಮಾಹಿತಿಯನ್ನು ನನ್ನ "ಬಂಟರು....ಕೃತಿಯಲ್ಲಿ ದಾಖಲಿಸಿರಬೇಕು. ಕಾಸರಗೋಡು ಮತ್ತು ಕುಂದಾಪುರದಲ್ಲಿ ಈ ಜನವರ್ಗ  ಇದ್ದಾರೆ. ಶ್ರೀ ಮಂತ ಬಂಟರ ಮತ್ತು ಹಿಂದೂ ಸಾಮಂತ ಬಲ್ಲಾಳರ ಮನೆಗಳಲ್ಲಿ ಇವರು ಅಡುಗೆಯನ್ನೂ ಮಾಡುತ್ತಿದ್ದರು ಎನ್ನುವುದು ಸತ್ಯ ಸಂಗತಿ.

6 comments:

  1. This comment has been removed by the author.

    ReplyDelete
  2. ಸರಳ ಮಾತುಗಳಲ್ಲಿ ಹೇಳುವುದಾದರೆ, ವಿಜಯನಗರ ಅರಸರ ಆಡಳಿತವಿದ್ದ ಕಾಲದಲ್ಲಿ ತುಳುನಾಡನ್ನು ಹೋಬಳಿ, ಸೀಮೆ, ಮಾಗಣೆ, ಬೀಡು, ಗ್ರಾಮ, ಗುತ್ತು ಇತ್ಯಾದಿ ಆಡಳಿತ ಘಟಕಗಳನ್ನಾಗಿಸಿ ಅವುಗಳಿಗೆ ಅಧಿಕಾರಿ ವರ್ಗವನ್ನೂ ನೇಮಿಸುವ ಪರಿಪಾಠವಿತ್ತು. ಹೋಬಳಿ, ಸೀಮೆ ಮಟ್ಟದಲ್ಲಿ ಇರುತ್ತಿದ್ದ ಅಧಿಕಾರಿ ವರ್ಗ ಬೀಡು, ಗುತ್ತಿನ ಮಟ್ಟಗಳಲ್ಲೂ ಇರುತ್ತಿತ್ತು.

    ಆ ವರ್ಗದಲ್ಲಿ ’ಭಂಡಾರಿ’, ’ಕೊಟ್ಟಾರಿ’ ಮುಂತಾದ ವೃತ್ತಿಸೂಚಕ ಹೆಸರುಗಳೂ ಸೇರಿವೆ.

    ಭಂಡಾರಿ: ರಾಜ ಭಂಡಾರದ ಜವಾಬ್ದಾರಿ ಹೊತ್ತವನು
    ಕೊಟ್ಟಾರಿ : ಕೊಟ್ಟಾರ ಅಥವಾ ಉಗ್ರಾಣದ ಜವಾಬ್ದಾರಿ ಹೊತ್ತವನು.

    ವೃತ್ತಿಸೂಚಕ ’ಭಂಡಾರಿ’ಯನ್ನು ಭಂಡ್ರಿಯಾಲ್ ಎಂದು ಕರೆದರೆ, ’ಕೊಟ್ಟಾರಿ’ಯನ್ನು ಕೊಟ್ಟಾರಿಯಾಲ್(ಕೊಟ್ರಿಯಾಲ್) ಎಂದು ಕರೆಯುತ್ತಾರೆ.

    ReplyDelete
  3. ವಿಜಯೇಂದ್ರರವರೇ
    ರಕ್ಷಾರವರು ಹಾದಿ ತಪ್ಪಿಲ್ಲ. ಅವರದು ಆರಂಭದ ಹೆಜ್ಜೆ. ಸಂದೇಹಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ನೀವು ಹೇಳುವ ಕೊಟ್ಟಾರಿವಾಲರ ಬಗ್ಗೆ ಅವರಿಗೂ ಅರಿವಿದೆ.
    ಈ ಬಗ್ಗೆ "ಬಂಟರು ಒಂದು ಸಮಾಜೋ ಸಾಂಸ್ಕೃತಿಕ ಅಧ್ಯಯನದಲ್ಲಿ ಸೂಕ್ಷ್ಮವಾಗಿ ತಿಳಿಸಲಾಗಿದೆ. ಅದನ್ನು ಓದಿ ಎದ್ದಿರುವ ಸಂದೇಹಗಳಿಗೆ ುತ್ತರ ಬಯಸಿದ್ದಾರೆ. ಈ ಸಂದೇಹಗಳಿಗೆ ಸಿಗುವ ಉತ್ತರ ಕಂಡು ಕೊಂಡ ಮೇಲೆ ಅವರು ಮುಂದಿನ ಹೆಜ್ಜೆ ಇಡಬಹುದು.

    ReplyDelete
  4. This comment has been removed by the author.

    ReplyDelete
  5. This comment has been removed by the author.

    ReplyDelete
  6. This comment has been removed by the author.

    ReplyDelete